ನವದೆಹಲಿ: ಬಾಂಗ್ಲಾದ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ, ಸದ್ಯ ಭಾರತದಲ್ಲಿರುವ ಶೇಖ್ ಹಸೀನಾರ ಪಾಸ್ಪೋರ್ಟ್ ರದ್ದು ಮಾಡಿದ ಬೆನ್ನಲ್ಲೇ, ಹಸೀನಾ ವೀಸಾ ಅವಧಿಯನ್ನು ಭಾರತ ಸರ್ಕಾರ ವಿಸ್ತರಿಸಿದೆ.
ಕಳೆದ ಜುಲೈನಲ್ಲಿ ಬಾಂಗ್ಲಾದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಅವಾಮಿ ಲೀಗ್ ನಾಯಕಿ, ಶೇಖ್ ಹಸೀನಾ ಸೇರಿದಂತೆ 96 ಜನರ ಪಾಸ್ಪೋರ್ಟ್ ರದ್ದುಗೊಳಿಸಿರುವುದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಹಸೀನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಭಾರತದಿಂದ ಹಸ್ತಾಂತರಿಸುವಂತೆ ಮಧ್ಯಂತರ ಸರ್ಕಾರ ಆಗ್ರಹಿಸುತ್ತಿದೆ. ಈ ನಡುವೆಯೇ ವೀಸಾ ವಿಸ್ತರಣೆ ಬೆಳವಣಿಗೆ ನಡೆದಿದೆ.