89
ಢಾಕಾ : ರಾಜಕೀಯವಾಗಿ ಅಸ್ಥಿರವಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿವೆ. ಹಳೆ ಢಾಕಾ ಪ್ರದೇಶದಲ್ಲಿ ಮಿಟ್ಟೋರ್ಡ್ ಆಸ್ಪತ್ರೆ ಎದುರು ಗುಜರಿ ವ್ಯಾಪಾರಿಯಾದ ಲಾಲ್ ಚಂದ್ ಸೋಹಾಗ್ ಎಂಬುವವರ ಮೇಲೆ ಕಾಂಕ್ರೀಟ್ ಫ್ಲ್ಯಾಬ್‌ಗಳನ್ನು ಬಳಸಿ ದಾಳಿ ಮಾಡಿ, ಹತ್ಯೆಗೈಯ್ಯಲಾಗಿದೆ. ಬಳಿಕ ಹಂತಕರು ಶವದ ಮೇಲೆ ಕುಣಿದಾಡಿ ವಿಕೃತಿ ಮೆರೆದಿದ್ದಾರೆ. ಈ ಸಂಬಂಧ 7 ಜನರನ್ನು ಬಂಧಿಸಲಾಗಿದೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಅದರಲ್ಲಿ 19 ಆರೋಪಿಗಳನ್ನು ಹೆಸರಿಸಲಾಗಿದೆ. ಪೊಲೀಸರು ಬಂಧಿಸಿರುವ 7 ಜನರ ಪೈಕಿ ಇಬ್ಬರ ಬಳಿ ಅಕ್ರಮ ಬಂದೂಕು ಪತ್ತೆಯಾಗಿದೆ.

