ಅಹಮದಾಬಾದ್ : ಇಲ್ಲಿನ ಚಂಡೋಲಾ ಕೆರೆ ಭಾಗದಲ್ಲಿ ನೆಲೆಸಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳ ಮನೆಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರವೂ ಮುಂದುವರಿದಿದ್ದು, 2000 ಮನೆ ನೆಲಸಮಗೊಂಡಿವೆ. 1 ಲಕ್ಷ ಚದರ ಮೀಟರ್ ವಿಸ್ತೀರ್ಣದ ಸರ್ಕಾರಿ ಜಾಗ ಮರಳಿ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
70 ಜೆಸಿಬಿಗಳು, 200 ಟ್ರಕ್‌ಗಳು ತೆರವು ಕಾರ್ಯವನ್ನು ನಡೆಸಿದವು. ಈ ಬಗ್ಗೆ ಮಾತನಾಡಿದ ಗುಜರಾತ್ ನ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಿಂಪ್ಲಿ, 1.25 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಇದರ ತೆರವು ಕಾರ್ಯ ಮುಂದುವರಿದಿದೆ. ಪ್ರತಿ ಇಂಚು ಸರ್ಕಾರಿ ಭೂಮಿಯನ್ನು ಮರಳಿ ಪಡೆಯಲಾಗುತ್ತದೆ ಎಂದರು
ಮಂಗಳವಾರ ಆರಂಭವಾದ ತೆರವು ಕಾರ್ಯದಲ್ಲಿ 2000ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ 70 ಜೆಸಿಬಿ, 200 ಟ್ರಕ್‌ಗಳು, 2000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ ವಾರ 500ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅಕ್ರಮ ಮನೆಗಳ ಸಮೀಕ್ಷೆ ನಡೆಸಿ ತೆರವು ಕಾರ್ಯ ಆರಂಭಿಸಿದ್ದರು.

