60
ಹೈದರಾಬಾದ್ : ಮಾವೋವಾದಿಗಳೊಂದಿಗಿನ ಯಾವುದೇ ಮಾತುಕತೆ ನಡೆಸುವುದಿಲ್ಲ. ನಿಷೇಧಿತ ಸಂಘಟನೆಯ ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು. ಪೊಲೀಸರ ಮುಂದೆ ಶರಣಾಗಬೇಕು ಮತ್ತು ಮುಖ್ಯವಾಹಿನಿಗೆ ಸೇರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಾವೋವಾದಿಗಳೊಂದಿಗೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ)ವನ್ನು ಕೇಳುತ್ತಿದೆ. ಶಸ್ತ್ರಾಸ್ತ್ರ ಹಿಡಿದವರೊಂದಿಗೆ ಮಾತುಕತೆ ಇಲ್ಲ ಎಂಬುದು ನಮ್ಮ ಸರ್ಕಾರದ ನೀತಿಯಾಗಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿ ಮತ್ತು ಮುಖ್ಯವಾಹಿನಿಗೆ ಸೇರಿ ಎಂದು ಅಮಿತ್ ಶಾ ಹೇಳಿದರು. ಈಶಾನ್ಯದಲ್ಲಿ ಸುಮಾರು 10,000 ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

