71
ಹೊಸದಿಲ್ಲಿ : ಇರಾನ್ ಮತ್ತು ಇಸ್ರೇಲ್ ದೇಶಗಳಿಂದ 658 ಭಾರತೀಯರನ್ನು ಕೇಂದ್ರ ಸರ್ಕಾರ ಮಂಗಳವಾರ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಆಪರೇಷನ್ ಸಿಂಧು ಮೂಲಕ ಇರಾನ್ನಿನಿಂದ 292 ಮತ್ತು ಇಸ್ರೇಲ್‌ನಿಂದ 366 ಭಾರತೀಯ ನಾಗರಿಕರನ್ನು ಕೇಂದ್ರ ಸರ್ಕಾರ ಸ್ಥಳಾಂತರ ಮಾಡಿದೆ.
ಇಸ್ರೇಲ್ ಗಡಿದಾಟುವ ಮೂಲಕ ಜೋರ್ಡನ್ ತಲುಪಿದ 161 ಭಾರತೀಯರನ್ನು ಅಮ್ಹಾನ್‌ನಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 8.20ರ ವೇಳೆಗೆ ಬಂದಿಳಿದರು. 165 ಭಾರತೀಯ ನಾಗರಿಕರ ಇನ್ನೊಂದು ತಂಡವನ್ನು ಸಿ-17 ಸೇನಾ ಸರಕು ವಿಮಾನದಲ್ಲಿ ದಿಲ್ಲಿಗೆ ಕರೆತರಲಾಗಿದೆ. ತವರಿಗೆ ಹಿಂದಿರುಗಿದ ಭಾರತೀಯರನ್ನು ಕೇಂದ್ರ ಸಚಿವ ಎಲ್.ಮುರುಗನ್ ಸ್ವಾಗತಿಸಿದರು. ಇರಾನ್ ಮಶ್ವಾದ್ ನಿಂದ ದಿಲ್ಲಿಗೆ ಮುಂಜಾನೆ 3.30ರ ವೇಳೆ ಬಂದಿಳಿದ ವಿಮಾನದಲ್ಲಿ 290 ಭಾರತೀಯರು ಮತ್ತು ಶ್ರೀಲಂಕಾ ಪ್ರಜೆಯೊಬ್ಬರು ಇದ್ದರು. ಇರಾನ್‌ನಿಂದ ಒಟ್ಟು 3.170 ಭಾರತೀಯ ನಾಗರಿಕರನ್ನು ಸುರಕ್ಷಿತ ಸ್ಥಳಾಂತರ ಮಾಡಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣ್ ಧೀರ್ ಜೈಸ್ವಾಲ್ ತಿಳಿಸಿದ್ದಾರೆ

