Home » ಪಾನ್, ಪಾನ್, ಪಾನ್ ಸಂದೇಶ ನೀಡಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
 

ಪಾನ್, ಪಾನ್, ಪಾನ್ ಸಂದೇಶ ನೀಡಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

by Kundapur Xpress
Spread the love

ಮುಂಬೈ : ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ದೋಷ ಕಂಡುಬಂದ ಹಿನ್ನೆಲೆ ಯಲ್ಲಿ ವಿಮಾನವನ್ನು ಮರಳಿ ಮುಂಬೈ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬುಧವಾರ ನಡೆ ದಿದೆ. ಈ ವೇಳೆ ‘ಪಾನ್ ಪಾನ್ ಪಾನ್’ ಎಂದು ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಸಂದೇಶ ರವಾನಿಸಿದ್ದಾರೆ. ಗಂಭೀರ ಅಪಾಯ ಕಂಡು ಬಂದ ವೇಳೆ ‘ಮೇಡೇ ಮೇಡೇ ಮೇಡೇ’ ಸಂದೇಶ ರವಾನಿಸಲಾಗುತ್ತದೆ. ದೋಷದ ತೀವ್ರತೆ ಕಡಿಮೆ ಇದ್ದಾಗ ಪಾನ್ ಸಂದೇಶ ರವಾನಿಸಲಾಗುತ್ತದೆ. ಇನ್ನು ಗುರುವಾರ ದೆಹಲಿಯಿಂದ ಇಂಫಾಲ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಕೂಡ 1 ಗಂಟೆ ಹಾರಾಡಿದ ಬಳಿಕ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆ ದೆಹಲಿಗೆ ತೆರಳಿದೆ.

 

Related Articles

error: Content is protected !!