Home » ಇರಾನ್‌ ಮೇಲೆ ಇಸ್ರೇಲ್‌ ಮತ್ತಷ್ಟು ದಾಳಿ
 

ಇರಾನ್‌ ಮೇಲೆ ಇಸ್ರೇಲ್‌ ಮತ್ತಷ್ಟು ದಾಳಿ

ಇರಾನ್‌ನ 406 ಮಂದಿ ಬಲಿ....?

by Kundapur Xpress
Spread the love

ದುಬೈ : ಇಸ್ರೇಲ್-ಇರಾನ್ ಕದನ ಸತತ 3ನೇ ದಿನವೂ ಮುಂದುವರಿದಿದೆ. ಭಾನುವಾರ ಕೂಡ ಇರಾನ್ ಮೇಲೆ ಇಸ್ರೇಲ್ ವಿಸ್ತ್ರತ ದಾಳಿ ನಡೆಸಿದ್ದು, ಇರಾನ್‌ನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ನಿಕ್ಷೇಪ, ತೈಲ ನಿಕ್ಷೇಪ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ. ಒಟ್ಟಾರೆ 3 ದಿನದ ಇಸ್ರೇಲ್ ದಾಳಿಗೆ ಇರಾನ್‌ನ 406 ಮಂದಿ ಬಲಿಯಾಗಿ 654 ಜನರು ಗಾಯ ಗೊಂಡಿದ್ದಾರೆ ಎಂದು ಮಾನವ ಹಕ್ಕು ಸಂಸ್ಥೆಯೊಂದು ಹೇಳಿದೆ.

ಇನ್ನೊಂದೆಡೆ ಶನಿವಾರ ತಡರಾತ್ರಿಯಿಂದ ಭಾನುವಾರ ನಸುಕಿನ ತನಕ ಇರಾನ್ ದಾಳಿಗಳಲ್ಲಿ ಇಸ್ರೇಲ್‌ನ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ 3 ದಿನದಲ್ಲಿ ‘ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 13 ದಾಟಿದೆ. 200 ಜನರು ಗಾಯಗೊಂಡಿದ್ದಾರೆ ಮತ್ತು 7 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ. ಭಾನುವಾರ ರಾತ್ರಿಯೂ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ಮಳೆಗರೆದಿದೆ. ಹೀಗಾಗಿ ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ಸಲ್ದಾಣ ಮತ್ತು ವಾಯುಪ್ರದೇಶವು 3ನೇ ದಿನವೂ ಮುಚ್ಚಲ್ಪಟ್ಟಿದೆ

 

Related Articles

error: Content is protected !!