Home » ಇಸ್ರೇಲ್‌-ಇರಾನ್‌ 4ನೇ ದಿನವೂ ಘೋರ ಕದನ
 

ಇಸ್ರೇಲ್‌-ಇರಾನ್‌ 4ನೇ ದಿನವೂ ಘೋರ ಕದನ

by Kundapur Xpress
Spread the love

ಟೆಹ್ರಾನ್ : ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 4ನೇ ದಿನವಾದ ಸೋಮವಾರ ಮತ್ತಷ್ಟು ತಾರಕಕ್ಕೇರಿದ್ದು ಎರಡೂ ದೇಶಗಳು ಹಗಲು-ರಾತ್ರಿ ದಾಳಿ-ಪ್ರತಿದಾಳಿ ಮುಂದುವರಿಸಿವೆ. ಇದೇ ವೇಳೆ, ಕದನ ವಿರಾಮಕ್ಕೆ ವಿಶ್ವದ ಕೆಲವು ದೇಶಗಳು ಮಾಡಿದ ಕರೆಯನ್ನು ಇರಾನ್ ತಿರಸ್ಕರಿಸಿದೆ.  ಯುದ್ಧ ದೀರ್ಘಕಾಲೀನ ಆಗಬಹುದು ಎಂಬ ಕಳವಳ ವಿಶ್ವದಲ್ಲಿ ಸೃಷ್ಟಿಯಾಗಿದೆ.

ಇಸ್ರೇಲ್ ಮೇಲೆ ಇರಾನ್ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ 100 ಕ್ಷಿಪಣಿ ಬಳಸಿ ಭಾರಿ ದಾಳಿ ನಡೆಸಿದೆ. ಈ ವೇಳೆ ಇಸ್ರೇಲ್‌ನ 5 ಜನರು ಸಾವನ್ನಪ್ಪಿದ್ದು. ಡಜನ್‌ಗಟ್ಟಲೆ ಜನರಿಗೆ ಗಾಯಗಳಾಗಿವೆ. ಇದರಿಂದ 4 ದಿನಗಳ ಸಮರದಲ್ಲಿ ಇಸ್ರೇಲ್ ನಲ್ಲಿನ ಸಾವಿನ ಸಂಖ್ಯೆ 24ಕ್ಕೇರಿದೆ.

ಇದೇ ವೇಳೆ, ಇಸ್ರೇಲ್‌ನ ಪ್ರಮುಖ ನಗರಿ ಟೆಲ್ ಅವಿವ್‌ನಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಕಟ್ಟಡದ ಭಾಗಕ್ಕೆ ಒಂದು ಕ್ಷಿಪಣಿಯ ಚೂರು ಬಿದ್ದಿದ್ದು, ಕಟ್ಟಡದ ಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ‘ಕ್ಷಿಪಣಿಯ ತುಣುಕು ಸಿಡಿದ ಕಾರಣ ಅಲ್ಪ ಹಾನಿಯಾಗಿದೆ. ಹೆಚ್ಚಿನ ಆತಂಕದ ಅಗತ್ಯವಿಲ್ಲ’ ಎಂದು ಅಮೆರಿಕ ಕಾನ್ಸುಲೇಟ್ ಸ್ಪಷ್ಟಪಡಿಸಿದೆ. ಇದೇ ವೇಳೆ, ಇಸ್ರೇಲ್‌ನ ಪ್ರಮುಖ ಬಂದರು ನಗರವಾದ ಹೈಫಾದ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಹೀಗಾಗಿ ಅದು ಹೊತ್ತಿ ಉರಿಯುತ್ತಿದೆ ಎಂದು ವರದಿಯಾಗಿದೆ. ಈ ಸಂಸ್ಕರಣಾಗಾರವು ಇಸ್ರೇಲ್‌ಗೆ ಶೇ. 80ರಷ್ಟು ಇಂಧನ ಪೂರೈಸುತ್ತದೆ. ಹೀಗಾಗಿ ಇಸ್ರೇಲ್‌ನಲ್ಲಿ ತೈಲ ಹಾಹಾಕಾರ ಸೃಷ್ಟಿಯಾಗಬಹುದು ಎನ್ನಲಾಗುತ್ತಿದೆ.

 

Related Articles

error: Content is protected !!