Home » ಇರಾನ್‌ ರಾಜಧಾನಿ ನಾಶಕ್ಕೆ ಇಸ್ರೇಲ್‌ ಪಣ
 

ಇರಾನ್‌ ರಾಜಧಾನಿ ನಾಶಕ್ಕೆ ಇಸ್ರೇಲ್‌ ಪಣ

by Kundapur Xpress
Spread the love

ಟೆಹ್ರಾನ್ : ಕಳೆದ 5 ದಿನದಿಂದ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ದಾಳಿ ಪ್ರತಿದಾಳಿಗಳು ಮುಂದುವರೆದಿವೆ. ಇರಾನ್‌ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪರಮಾಪ್ತ ಸೇನಾ ಸಲಹೆಗಾರ ಜ। ಅಲಿ ಶಾದ್ಧಾನಿಯನ್ನು ವಾಯುದಾಳಿಯಲ್ಲಿ ಇಸ್ರೇಲ್ ಹತ್ಯೆ ಮಾಡಿದೆ ಹಾಗೂ ಪಶ್ಚಿಮ ಇರಾನ್‌ನ ಖಂಡಾಂತರ ಕ್ಷಿಪಣಿ ಉಡಾವಣಾ ತಾಣಗಳನ್ನು ಧ್ವಂಸ ಮಾಡಿದೆ.

ಇದೇ ವೇಳೆ, ‘ರಾಜಧಾನಿ ಟೆಹ್ರಾನ್ ಮೇಲೆ ಗಾಜಾ ಮಾದರಿಯಲ್ಲಿ ದಾಳಿ ನಡೆಸಲಾಗುವುದು. ಟೆಹ್ರಾನ್‌ನ 3.30 ಲಕ್ಷ ಜನರು ಕೂಡಲೇ ನಗರ ತೊರೆಯಬೇಕು’ ಎಂದು ಇಸ್ರೇಲ್ ಸೂಚನೆ ನೀಡಿದೆ. ಹಮಾಸ್ ವಿರುದ್ಧ ಸಮರದ ವೇಳೆಯೂ ಗಾಜಾನಗರವನ್ನು ತೊರೆಯುವಂತೆ ಸೂಚಿಸಿದ್ದ ಇಸ್ರೇಲ್, ಬಳಿಕ ಬಹುತೇಕ ಇಡೀ ನಗರವನ್ನೇ ಧ್ವಂಸಗೊಳಿಸಿತ್ತು.

ಮತ್ತೊಂದೆಡೆ ಯುದ್ಧದಲ್ಲಿ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಟೆಹ್ರಾನ್ ನಗರವನ್ನು ಜನರು ಕೂಡಲೇ ತೊರೆಯಬೇಕು’ ಎಂದಿದ್ದಾರೆ. ಈ ಮೂಲಕ ಇರಾನ್ ಮೇಲೆ ಇಸ್ರೇಲ್ ಭಾರಿ ಮತ್ತಷ್ಟು ಘೋರ ದಾಳಿ ನಡೆಸುವ ಮುನ್ಸೂಚನೆ ಲಭಿಸಿದೆ.

ಇಷ್ಟೆಲ್ಲ ವಿದ್ಯಮಾನದ ಹೊರತಾಗ್ಯೂ ಸುಮ್ಮನಾಗದ ಇರಾನ್, ಮಂಗಳವಾರ ರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದಿದೆ

 

Related Articles

error: Content is protected !!