Home » ಇಸ್ರೇಲ್‌ ಮೇಲೆ ಬಾಂಬ್‌ ಸುರಿಮಳೆ
 

ಇಸ್ರೇಲ್‌ ಮೇಲೆ ಬಾಂಬ್‌ ಸುರಿಮಳೆ

by Kundapur Xpress
Spread the love

ಟೆಲ್‌ ಅವಿವ್ : ಇಸ್ರೇಲ್-ಇರಾನ್ ನಡುವಿನ ಕಾಳಗ 8ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಎರಡೂ ರಾಷ್ಟ್ರಗಳು ಪರಸ್ಪರ ಆಕ್ರ ಮಣಕಾರಿಯಾಗಿ ಹಗಲು-ರಾತ್ರಿಯೆನ್ನದೇ ದಾಳಿ ಮುಂದುವರೆಸಿವೆ. ತನ್ನ ಶತ್ರು ರಾಷ್ಟ್ರದ ಮೇಲೆ ಇರಾನ್, ಇದೇ ಮೊದಲ ಬಾರಿಗೆ ‘ಕ್ಲಸ್ಟ‌ರ್ ಬಾಂಬ್’ ಪ್ರಯೋಗಿಸಿದ್ದು, ಇಸ್ರೇಲ್ ನಾದ್ಯಂತ ಸೈರಲ್ ಮೊಳಗಿಸಿ ಕಟ್ಟೆಚ್ಚರ ಸಾರಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಭಾರೀ ದಾಳಿ ನಡೆಸಿದೆ

ಯುದ್ಧದಲ್ಲಿ ಸದ್ಯ ಮಧ್ಯ ಪ್ರವೇಶಿಸದೇ 2 ವಾರ ಕಾದು ನೋಡುವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅತ್ತ ಇರಾನ್‌ ಕೂಡ ಅಮೆರಿಕ ಸಂಧಾನ ಮಾತುಕತೆಗೆ ನಿರಾಕರಿಸಿದ್ದರೂ, ಯುದ್ಧಕ್ಕೆ ಸಂಬಂಧಿಸಿ ಯುರೋಪ್ ದೇಶಗಳ ಜತೆ ಮಾತುಕತೆ ನಡೆಸುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಟ್ರಂಪ್ ಸಾಥ್ ನೀಡದಿದ್ದರೂ ನಾವು ಇರಾನ್‌ನ ಎಲ್ಲ ಅಣ್ವಸ್ತ್ರ ನೆಲೆ ನಾಶ ಮಾಡುತ್ತೇವೆ’ ಎಂದಿದ್ದಾರೆ

 

Related Articles

error: Content is protected !!