Home » ಇಸ್ರೇಲ್‌ ದಾಳಿಗೆ ಇರಾನ್ ಮತ್ತಷ್ಟು ಛಿದ್ರ
 

ಇಸ್ರೇಲ್‌ ದಾಳಿಗೆ ಇರಾನ್ ಮತ್ತಷ್ಟು ಛಿದ್ರ

by Kundapur Xpress
Spread the love

ದುಬೈ : ಅಮೆರಿಕದ ಭಾರೀ ಬಾಂಬ್ ದಾಳಿ ಬೆನ್ನಲ್ಲೇ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮೇಲೆ ‘ಟೂ ಪ್ರಾಮಿಸ್ 3’ ಹೆಸರಲ್ಲಿ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಅದರ ಬೆನ್ನಲ್ಲೇ ಇರಾನ್ನ ಫೋರ್ಡೋ ಪರಮಾಣು ನೆಲೆ, 6 ವಿಮಾನ ನಿಲ್ದಾಣ, ರೆವಲ್ಯೂಷನರಿ ಗಾರ್ಡ್ಸ್ ಕಚೇರಿ, ಕುಖ್ಯಾತಿ ಇವಿನ್ ಜೈಲಿನ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಜೊತೆಗೆ 15 ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯ ಬಳಿಕ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಮುಗಿಲೆತ್ತರದ ಕಪ್ಪುಹೊಗೆ ಕಂಡುಬಂದಿದೆ.

ಇರಾನ್ ದಾಳಿ :

ಅಮೆರಿಕದ ದಾಳಿಯಿಂದ ಆಕ್ರೋಶಗೊಂಡಿದ್ದ ಇರಾನ್, ಸೋಮವಾರ ಇಸ್ರೇಲ್ ರಾಜಧಾನಿ ಟೆಲ್ ಅವಿವ್, ಹಫಿಯಾ ಸೇರಿ ಹಲವು ನಗರಗಳ ಆಯಕಟ್ಟಿನ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಪವಿತ್ರ ನಗರಿ ಜೆರುಸಲೆಂನಲ್ಲೂ ಭಾರೀ ಸ್ಪೋಟದ ಸದ್ದು ಕೇಳಿಬಂದಿದೆ.

ದಾಳಿ ತೀವ್ರಗೊಳಿಸಿದ ಇಸ್ರೇಲ್ :

ಈ ನಡುವೆ ಇರಾನ್ ವಿರುದ್ಧ ಸೋಮವಾರ ಪ್ರತಿದಾಳಿ ಸಂಘಟಿಸಿರುವ ಇಸ್ರೇಲ್, ಶತ್ರು, ದೇಶದ ವಾಯುಸೇನೆಯ ನಡುಮುರಿಯಲೆತ್ನಿಸಿದೆ. ಪೂರ್ವ, ಪಶ್ಚಿಮ ಮತ್ತು ಕೇಂದ್ರ ಇರಾನ್‌ನಲ್ಲಿರುವ ಆರು ಏರ್ಪೋಟ್‌್ರಗಳು ಸೇರಿ ಪ್ರಮುಖ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ವೇಳೆ ಏರ್ಪೋಟ್ನ್ರ ಭೂಗತ ಕಟ್ಟಡಗಳಲ್ಲಿ ಇರಿಸಿದ್ದ ಇಂಧನ ಮರುಪೂರಣ ವಿಮಾನ, ಎಫ್.-14, ಎಫ್-5, ಎಎಚ್-1 ವಿಮಾನಗಳು ಸೇರಿ ಒಟ್ಟು 15 ವಿಮಾನಗಳು, 1 ಹೆಲಿಕಾಪ್ಟರ್‌ಗೆ ಹಾನಿಯಾಗಿದೆ.

 

Related Articles

error: Content is protected !!