238
ಅಹಮದಾಬಾದ್ : ಅಹಮದಾಬಾದ್‌ನ ಜಗನ್ನಾಥ ದೇಗುಲದ ರಥಯಾತ್ರೆ ವೇಳೆ ಕೆರಳಿದ ಆನೆಯೊಂದು ರಸ್ತೆಗೆ ನುಗ್ಗಿದ್ದರಿಂದ ವ್ಯಕ್ತಿ ಗಾಯಗೊಂಡ ಘಟನೆ ನಡೆದಿದೆ.
ರಥಯಾತ್ರೆ ನಡೆಯುತ್ತಿದ್ದ ವೇಳೆ ಖಾಡಿಯಾ ಪ್ರದೇಶದಲ್ಲಿ ಕೆರಳಿದ ಗಂಡು ಆನೆಯೊಂದು ಬ್ಯಾರಿಕೇಡ್ ಮುರಿದು ಇಕ್ಕಟ್ಟಾದ ರಸ್ತೆಗೆ ನುಗ್ಗಿದೆ. ಆಗ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ. ಉಳಿದೆರಡು ಆನೆಗಳ. ಮೇಲಿದ್ದ ಮಾವುತರು ಕೆರಳಿದ ಆನೆಯನ್ನು ಹಿಂಬಾಲಿಸಿ, ಅದನ್ನು ನಿಯಂತ್ರಿಸಿದ್ದಾರೆ. ಬಳಿಕ ರಥಯಾತ್ರೆ ನಿಗದಿತ ಮಾರ್ಗದಲ್ಲಿ ಸುಗಮವಾಗಿ ಮುಂದುವರಿದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

