Home » ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ತಲೆ ಎತ್ತಲು ಬಿಡೆವು : ಸಿನ್ಹಾ
 

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ತಲೆ ಎತ್ತಲು ಬಿಡೆವು : ಸಿನ್ಹಾ

by Kundapur Xpress
Spread the love

ಶ್ರೀನಗರ : ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಅಮಾಯಕರ ರಕ್ತ ಚೆಲ್ಲುವುದೇ ಕೇಂದ್ರಾಡಳಿತ ಪ್ರದೇಶದ ಭಯೋತ್ಪಾದಕರಿಗೆ ಮತ್ತು ಸಂಘರ್ಷಾಸಕ್ತರಿಗೆ ದೊಡ್ಡ ವ್ಯವಹಾರವಾಗಿದೆ. ಆದರೆ  ಇನ್ನು ಮುಂದೆ ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂಸಾಚಾರ ಗಲಭೆಗೆ ಅವಕಾಶವಿರದು, ಉಗ್ರರಿಗೆ ತಲೆ ಎತ್ತಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಶನಿವಾರ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಿನ್ಹಾ, ಕಳೆದ ಐದು ವರ್ಷಗಳಲ್ಲಿ, ಪೊಲೀಸ್, ಭದ್ರತಾ ಪಡೆಗಳು ಮತ್ತು ಆಡಳಿತ, ಜನರ ಬೆಂಬಲದೊಂದಿಗೆ ಜಮ್ಮು-ಕಾಶ್ಮೀರವನ್ನು ಹಿಂದಿನ ಸ್ಥಿತಿಯಿಂದ ಹೊರತರುವಲ್ಲಿ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ಹೇಳಿದರು.

ಸಕ್ರಿಯವಾಗಿರಲು ಪ್ರಯತ್ನಿಸುತ್ತಿರುವ ಕೆಲವು ಸಂಘರ್ಷಾಸಕ್ತರು ಇನ್ನೂ ಇದ್ದಾರೆ. ಆದರೆ ಅಂತಹ ಯಾವುದೇ ವ್ಯಕ್ತಿಗೆ ಅವಕಾಶ ನೀಡುವುದಿಲ್ಲ. ಜಮ್ಮು-ಕಾಶ್ಮೀರದ ಯುವಕರು ಅಂತವರ ದುಷ್ಟ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂಬುದು ಸಂತೋಷದ ವಿಷಯ ಎಂದು ಅವರು ಹೇಳಿದರು.

ಯುವಕರಲ್ಲಿ ಸೂಫಿಸಂ ಅನ್ನು ಜನಪ್ರಿಯಗೊಳಿಸಲು ದೀರ್ಘಾವಧಿಯ ಯೋಜನೆ ರೂಪಿಸುವ ಅವಶ್ಯಕತೆಯಿದೆ ಎಂದು ಭಾಗವಹಿಸಿದ್ದ ಸೂಫಿ ವಿದ್ವಾಂಸರನ್ನು ಅವರು ವಿನಂತಿಸಿದರು. ಆ ಮೂಲಕ ಉಗ್ರಗಾಮಿಗಳ ಸಿದ್ಧಾಂತ ಜನರಲ್ಲಿ ಅಭಿವೃದ್ಧಿ ಹೊಂದಲು ಅವಕಾಶ ಸಿಗುವುದಿಲ್ಲ ಎಂದು ಅವರು ಹೇಳಿದರು.

 

Related Articles

error: Content is protected !!