Home » ಕೇಂದ್ರ ಸರ್ಕಾರದಿಂದ ಜನಗಣತಿ ಜೊತೆ ಜಾತಿಗಣತಿ
 

ಕೇಂದ್ರ ಸರ್ಕಾರದಿಂದ ಜನಗಣತಿ ಜೊತೆ ಜಾತಿಗಣತಿ

1931ರ ನಂತರ ಮೊದಲ ಬಾರಿಗೆ ಜಾತಿಗಣತಿ

by Kundapur Xpress
Spread the love

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದರೊಂದಿಗೆ ಸುಮಾರು 1931ರ ಬಳಿಕ ದೇಶದಲ್ಲಿ ಮತ್ತೊಮ್ಮೆ ದೇಶದಲ್ಲಿನ ಎಲ್ಲಾ ಜನರ ಜಾತಿಯ ಕುರಿತ ಮಾಹಿತಿಯನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಬಿಹಾರ, ತೆಲಂಗಾಣದಲ್ಲಿ ಜಾತಿಗಣತಿ ನಡೆಸಿ ಹಿಂದುಳಿದ ಸಮುದಾಯಕ್ಕೆ ಹೆಚ್ಚಿನ ಮೀಸಲು ನೀಡಿದ ಮತ್ತು ಕರ್ನಾಟಕದಲ್ಲಿ ನಡೆಸಲಾದ ಜಾತಿಗಣತಿ ವರದಿ ಭಾರೀ ವಿವಾದಕ್ಕೆ ಕಾರಣವಾಗಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ತಾನೂ ಜಾತಿಗಣತಿ ನಡೆಸುವ ನಿರ್ಧಾರ ಪ್ರಕಟಿಸಿದೆ. ಸರ್ಕಾರದ ನಿರ್ಧಾರವನ್ನು ಕೇಂದ್ರ ದ ಎನ್ ಡಿಎ ಸರ್ಕಾರದ ಎಲ್ಲಾ ಮಿತ್ರಪಕ್ಷಗಳು ಮತ್ತು ಕಾಂಗ್ರೆಸ್ ಆದಿಯಾಗಿ ವಿಪಕ್ಷಗಳು ಸ್ವಾಗತಿಸಿವೆ

 

Related Articles

error: Content is protected !!