63
ಮುಂಬೈ : ಪಾಕಿಸ್ತಾನ ಮತ್ತು ನರಕದ ನಡುವೆ ನನ್ನ ಮುಂದೆ ಆಯ್ಕೆ ಬಂದರೆ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುವೆ ಎಂಬುದಾಗಿ ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ. ಅವರು ಮುಂಬೈಯಲ್ಲಿ ಶನಿವಾರ ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವುತ್‌ರ ನರ್ಕಟ್ಲ ಸ್ವರ್ಗ್ (ಚೌಗುನಲ್ಲಿ ಸ್ವರ್ಗ) ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ, ಈ ಮಾತನ್ನು ಹೇಳಿದರು.
ಇದೇ ವೇಳೆ ಮುಸ್ಲಿಮರು ಮತ್ತು ಹಿಂದುಗಳಲ್ಲಿನ ಒಂದು ವರ್ಗ ತನ್ನನ್ನು ಕಾಫಿರ್ ಮತ್ತು ಜಿಹಾದಿ ಎಂದು ನಿಂದಿಸಿದ್ದಾಗಿ ತಿಳಿಸಿದ ಜಾವೇದ್, ಕಾಫಿರ್ ಆದ ನಾನು ನರಕಕ್ಕೆ ಹೋಗಲಿರುವುದಾಗಿ ಮತ್ತು ಜಿಹಾದಿ ಎಂದವರು ಪಾಕಿಸ್ತಾನಕ್ಕೆ ಹೋಗಿ ಎಂದರು. ಏನೇ ಇದ್ದರೂ ಪಾಕಿಸ್ತಾನ ಮತ್ತು ನರಕಗಳ ನಡುವೆ ನನ್ನ ಆಯ್ಕೆ ಕೇಳಿದರೆ ನರಕ ಎಂದರು.

