Home » ಜಯಲಲಿತಾ ಆಸ್ತಿ ತಮಿಳುನಾಡಿಗೆ ಹಸ್ತಾಂತರ
 

ಜಯಲಲಿತಾ ಆಸ್ತಿ ತಮಿಳುನಾಡಿಗೆ ಹಸ್ತಾಂತರ

by Kundapur Xpress
Spread the love

ಬೆಂಗಳೂರು : ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರಿಗೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.

ನ್ಯಾಯಾಲಯದ ಆದೇಶದಂತೆ ಅಪಾರ ಪ್ರಮಾಣದ ಚಿನ್ನಾಭರಣ, ಜಮೀನು ಪತ್ರಗಳು ಜಪ್ತಿ ಮಾಡಲಾಗಿದ್ದ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ. ಚಿನ್ನದ ಖಡ್ಗ, ಡಾಬು, ಕೈ ಗಡಿಯಾರ, ಪೆನ್ ಸೇರಿದಂತೆ 27 ಕೆಜಿ ವಿವಿಧ ಚಿನ್ನಾಭರಣಗಳು ಇನ್ನಿತರ ದುಬಾರಿ ಮೌಲ್ಯದ 1606 ವಸ್ತುಗಳನ್ನು ಕೊಡಲಾಗಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅಪರಾಧಿ ಎಂದು ಬೆಂಗಳೂರಿನ ವಿಶೇಷ ಕೋರ್ಟ್ ತೀರ್ಪು ನೀಡಿತ್ತು.

» ಚಿನ್ನದ ಖಡ್ಗ, ಡಾಬು ಸೇರಿ 27 ಕೆಜಿ ಚಿನ್ನಾಭರಣ

* ದುಬಾರಿ ಮೌಲ್ಯದ ಸೀರೆಗಳು ಸೇರಿ 1606 ವಸ್ತುಗಳು

* 1526 ಎಕರೆ ಜಾಗದ ಆಸ್ತಿ ಪತ್ರಗಳು, ನಗದು ಹಸ್ತಾಂತರ

 

Related Articles

error: Content is protected !!