Home » ಕುಂಭಮೇಳಕ್ಕೆ ಇಂದು ತೆರೆ
 

ಕುಂಭಮೇಳಕ್ಕೆ ಇಂದು ತೆರೆ

by Kundapur Xpress
Spread the love

ಪ್ರಯಾಗರಾಜ್ : ವಿಶ್ವದ ಅತಿದೊಡ್ಡ ಧಾರ್ಮಿಕ ಸಂಗಮ ಮುಕ್ತಾಯಗೊಳ್ಳುತ್ತಿದ್ದಂತೆ, ಮಹಾಶಿವರಾತ್ರಿಯ ಸಂದರ್ಭದಲ್ಲಿ ಬುಧವಾರ 2025ರ ಮಹಾಕುಂಭ ಮೇಳದ ಅಂತಿಮ ಅಮೃತ ಸ್ನಾನದಲ್ಲಿ ಒಂದು ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮಹಾ ಕುಂಭದ ಕೊನೆಯ ದಿನದಂದು ದೊಡ್ಡ ಸಂಖ್ಯೆಯ ಯಾತ್ರಾರ್ಥಿಗಳನ್ನು ನಿರ್ವಹಿಸಲು ಉತ್ತರ ಪ್ರದೇಶ ಸರ್ಕಾರ ವಿಸ್ತ್ರತ ವ್ಯವಸ್ಥೆ ಮಾಡಿಕೊಂಡಿದೆ.

64 ಕೋಟಿ ಭಕ್ತರು :

ಜ.13ರಂದು ಮಹಾಕುಂಭ ಆರಂಭವಾದಾಗಿನಿಂದ ಈವರೆಗೆ ಸುಮಾರು 64 ಕೋಟಿ ಭಕ್ತರು ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿಪವಿತ್ರ ಸ್ನಾನ ಮಾಡಿದ್ದಾರೆ ಜನವರಿ 13, 14, 29, ಫೆ. 3 ಮತ್ತು 12ರವರೆಗೆ ಒಟ್ಟು 5 ಅಮೃತ ಸ್ನಾನ ಗಳು ನಡೆದಿವೆ. ರೈಲುಗಳು, ವಿಮಾನಗಳು, ರಸ್ತೆ ಮಾರ್ಗಗಳು ತುಂಬಿ ತುಳುಕುತ್ತಿದ್ದು, ಕೋಟ್ಯಂತರ ಭಕ್ತರ ಆಗಮನವಾಗುತ್ತಿದೆ. ಲಖನೌ, ಪ್ರತಾಪ್ ಗಢದಿಂದ ಬರುವ ಯಾತ್ರಾರ್ಥಿಗಳಿಗೆ ಫಾಫಾಮ್ ಘಾಟ್ ನಿಗದಿಪಡಿಸಲಾಗಿದೆ ಎಂದು ಸರಕಾರ ತಿಳಿಸಿದೆ

 

Related Articles

error: Content is protected !!