ಪ್ರಯಾಗರಾಜ್ : 12 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಬೃಹತ್ ಧಾರ್ಮಿಕ ಸಮಾಗಮವಾದ ‘ಮಹಾ ಕುಂಭಮೇಳ’ ಕ್ಕೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಪುಷ್ಯ ಹುಣ್ಣಿಮೆಯ ಪವಿತ್ರ ದಿನವಾದ ಇಂದು ಸೋಮವಾರ ಚಾಲನೆ ಸಿಗಲಿದೆ. ಪುಣ್ಯಸ್ನಾನದೊಂದಿಗೆ ಆರಂಭವಾಗಲಿರುವ ಕಾರ್ಯಕ್ರಮ ಫೆ.26ರ ಶಿವರಾತ್ರಿ ಯಂದು 45 ದಿನಗಳ ಬಳಿಕ ಸಂಪನ್ನಗೊಳ್ಳಲಿದೆ
ಈ ಬಾರಿಯ ಕುಂಭಮೇಳಕ್ಕೆ ದಾಖಲೆ 35-40 ಕೋಟಿ ಜನರ ಆಗಮನದ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಅಭೂತ ಪೂರ್ವ ಸಿದ್ಧತೆಗಳನ್ನು ನಡೆಸಿದೆ. ದೇಶ ವಿದೇಶ ಗಳಿಂದ ಆಗಮಿಸುವ ಭಕ್ತರಿಗೆ ಎಲ್ಲಾ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದೆ