ಛತ್ರಪತಿ ಸಂಭಾಜಿನಗರ : ಕಾಶ್ಮೀರಕ್ಕಾಗಿ ಪ್ರತ್ಯೇಕ ಸಂವಿಧಾನ ರಚಿಸಲು ಮತ್ತು ಅಲ್ಲಿ ಸಂವಿಧಾನದ ವಿಧಿ 370ರ ಜಾರಿಗಾಗಿ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ಭಾರೀ ಷಡ್ಯಂತ್ರ ನಡೆಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಛತ್ರಪತಿ ಸಂಭಾಜಿನಗರದಲ್ಲಿನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಇಂತಹವರನ್ನು ಬೆಂಬಲಿಸ್ತೀರಾ ಎಂದು ಪ್ರಶ್ನಿಸಿದರು. ಹಾಗೆಯೇ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವಿರ ಬೇಕೆಂಬುದು ಪ್ರತಿ ಭಾರತೀಯನ ಆಗ್ರಹ ಮತ್ತು ಆಶಯವಾಗಿದೆ
ಜನರ ಆಶಯಗಳಿಗೆ ವಿರುದ್ಧವಾಗಿ ಪಾಕಿಸ್ತಾನದ ಭಾಷೆ ಮಾತನಾಡುವ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳಿಗೆ ನೀವು ಮಹಾರಾಷ್ಟ್ರೀಗರು ಬೆಂಬಲ ನೀಡುತ್ತೀರಾ ಎಂದು ಪ್ರಧಾನಿ ಕೇಳಿದರು