Home » ಮೋದಿಗೆ ಮಾರಿಷಸ್ ಅತ್ಯುನ್ನತ ಗೌರವ
 

ಮೋದಿಗೆ ಮಾರಿಷಸ್ ಅತ್ಯುನ್ನತ ಗೌರವ

by Kundapur Xpress
Spread the love

ಪೋರ್ಟ್‌ ಲೂಯಿಸ್‌ : ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮ್ ಗುಲಾಮ್ ಅವರು ತಮ್ಮ ದೇಶದ ಅತ್ಯುನ್ನತ ಗೌರವವಾದ ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಅಂಡ್ ಕೀ ಆಫ್ ದಿ ಇಂಡಿಯನ್ ಓಷನ್ ಅನ್ನು ಪ್ರಧಾನಿ ಮೋದಿ ಅವರಿಗೆ ಘೋಷಿಸಿದರು.

ತಮ್ಮ ಭಾಷಣದ ಸಮಯದಲ್ಲಿ, ಮೋದಿ ಈ ಗೌರವವನ್ನು ಹೃತ್ತೂರ್ವಕವಾಗಿ ಸ್ವೀಕರಿಸಿದ್ದು ಮಾರಿಷಸ್‌ನ ಜನರು ಮತ್ತು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಮಾರಿಷಸ್‌ ಜನರು ಮತ್ತು ಸರ್ಕಾರವು ನನಗೆ ತಮ್ಮ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲು ನಿರ್ಧರಿಸಿದೆ. ನಾನು ಈ ನಿರ್ಧಾರವನ್ನು ಬಹಳ ಗೌರವದಿಂದ ವಿನಮ್ರವಾಗಿ ಸ್ವೀಕರಿಸುತ್ತೇನೆ. ಇದು ನನಗೆ ಕೇವಲ ಗೌರವವಲ್ಲ, ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಬಾಂಧವ್ಯಕ್ಕೆ ಸಂದ ಗೌರವವಾಗಿದೆ ಎಂದು ಅವರು ಹೇಳಿದರು.

 

Related Articles

error: Content is protected !!