138
ಜಮ್ಮು : 370ನೇ ವಿಧಿಯೀಗ ಮುಗಿದುಹೋದ ಅಧ್ಯಾಯ. ಇದು ಇನ್ನೆಂದಿಗೂ ಕೇಂದ್ರಾಡಳಿತ ಪ್ರದೇಶಕ್ಕೆ ಮರಳದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೆ ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಆಡಳಿತವು ಜಮ್ಮು ಕಾಶ್ಮೀರ ಸಹಿತ ದೇಶದ ಪಾಲಿಗೆ ಸ್ವರ್ಣಾಕ್ಷರಗಳಲ್ಲಿ ಬರೆದಿಡುವ ಆಡಳಿತವಾಗಿದೆ. ಉತ್ತಮ ಆಡಳಿತದ ನಿರಂತರತೆಗಾಗಿ ಈ ಬಾರಿಯೂ ತನ್ನ ಪಕ್ಷಕ್ಕೆ ಮತ ನೀಡುವಂತೆ ಜನರಿಗೆ ಕರೆ ನೀಡಿದರು.
ಜಮ್ಮು ಕಾಶ್ಮೀರ ವಿಧಾನಸಭೆಗೆ ಸೆ.18, 25 ಮತ್ತು ಅ.1ರಂದು 3ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಬೆಳಗ್ಗೆ ಸಚಿವ ಶಾ ಜಮ್ಮು ತಲುಪಿದ್ದಾರೆ
ಇದೇ ಸಂದರ್ಭದಲ್ಲಿ ಅವರು ಜಮ್ಮು ಕಾಶ್ಮೀರ ಚುನಾವಣೆಯ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಳಿಸಿದರು

