Home » ಮೋದಿಗೆ ಮಿತ್ರ ವಿಭೂಷಣ ಪ್ರಶಸ್ತಿ
 

ಮೋದಿಗೆ ಮಿತ್ರ ವಿಭೂಷಣ ಪ್ರಶಸ್ತಿ

ಲಂಕೆಯ ಅತ್ಯುಚ್ಚ ನಾಗರಿಕ ಗೌರವ

by Kundapur Xpress
Spread the love

 ಕೊಲಂಬೋ : ಶ್ರೀಲಂಕಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಕೆಯ ಅತ್ಯುಚ್ಚ ನಾಗರಿಕ ಗೌರವವಾದ ಮಿತ್ರ ವಿಭೂಷಣ ಪ್ರಶಸ್ತಿಯನ್ನು ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಶನಿವಾರ ಪ್ರದಾನ ಮಾಡಿದ್ದಾರೆ. ಇದರೊಂದಿಗೆ ಮೋದಿ ಅವರು 22 ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದಂತಾಗಿದೆ

2008ರಲ್ಲಿ ಮಹಿಂದ ರಾಜಪಕ್ಸೆ ಅವಧಿಯಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಪ್ರತಿ ಮೋದಿಯವರ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ.

ಪ್ರಶಸ್ತಿಯು ಫಲಕ, ಲಂಕಾದ 9 ವಿಧದ ರತ್ನ, ತಾವರೆ, ಭೂಗೋಳ, ಸೂರ್ಯ, ಚಂದ್ರ, ಭತ್ತದ ತೆನೆಯ ಚಿಹ್ನೆಯುಳ್ಳ ಬೆಳ್ಳಿಯ ಪದಕ ಹೊಂದಿದೆ. ‘ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದು ಮೋದಿ ಹರ್ಷಿಸಿದ್ದಾರೆ.

 

Related Articles

error: Content is protected !!