70
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಜುಲೈ 2 ರಿಂದ 9 ರವರೆಗೆ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದು 8 ದಿನಗಳ ಪ್ರವಾಸವಾಗಿದ್ದು, ಅವರ 11 ವರ್ಷದ ಅಧಿಕಾರಾವಧಿಯಲ್ಲೇ ಅತಿ ಸುದೀರ್ಘ ವಿದೇಶಯಾನವಾಗಲಿದೆ. ಪ್ರಧಾನಿಯವರ ಪ್ರವಾಸವು 2 ಖಂಡಗಳನ್ನು ಒಳಗೊಂಡಿದ್ದು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗಳಿಗೆ ಭೇಟಿ ನೀಡಲಿದ್ದಾರೆ.
ಈ ಪೈಕಿ ಬ್ರಿಕ್ಸ್ ಶೃಂಗಸಭೆಗಾಗಿ ಬ್ರೆಜಿಲ್‌ನಲ್ಲಿ ಮೋದಿ 4 ದಿನ (ಜುಲೈ 5ರಿಂದ 8ರವರೆಗೆ) ತಂಗಲಿದ್ದಾರೆ. ಉಳಿದ 4 ದೇಶಗಳಲ್ಲಿ ಅವರು ತಲಾ 1 ದಿನ ತಂಗಲಿದ್ದಾರೆ. ಇವುಗಳು ಭಾರತದ ಜತೆ ಉತ್ತಮ ಸಂಬಂಧ ಹೊಂದಿರುವ ಹಾಗೂ ಭಾರತೀಯರು ಅಧಿಕ ಸಂಖ್ಯೆಯಲ್ಲಿರುವ ದೇಶಗಳಾಗಿವೆ.

