Home » ಇಂದಿನಿಂದ ಮೋದಿ ಬ್ರಿಟನ್, ಮಾಲ್ಡೀವ್ಸ್‌ ಪ್ರವಾಸ
 

ಇಂದಿನಿಂದ ಮೋದಿ ಬ್ರಿಟನ್, ಮಾಲ್ಡೀವ್ಸ್‌ ಪ್ರವಾಸ

4 ದಿನಗಳ ಕಾಲ ಪ್ರವಾಸ

by Kundapur Xpress
Spread the love

ನವದಹಲಿ : ಇತ್ತೀಚೆಗಷ್ಟೇ 5 ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ಜು.23 ರಿಂದ 4 ದಿನಗಳ ಕಾಲ ಬ್ರಿಟನ್ ಮತ್ತು ಮಾಲ್ಮೀಮ್ಸ್ ಗೆ ಭೇಟಿ ನೀಡಲಿದ್ದಾರೆ. 24ರಂದು ಬ್ರಿಟನ್‌ಗೆ ತೆರಳಲಿದ್ದು, ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಅಲ್ಲದೆ, ಭಾರತ ವಿರೋಧಿ ಖಲಿಸ್ತಾನಿ ಉಗ್ರ ಚಟುವಟಿಕೆಗಳ ನಿಗ್ರಹ ಕುರಿತಾಗಿಯೂ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜತೆ ಚರ್ಚಿಸುವ ನಿರೀಕ್ಷೆಯಿದೆ. ಬ್ರಿಟನ್ ಬಳಿಕ 25, 26ರಂದು ಮಾಡ್ತೀವ್‌ಗೆ ತೆರಳಲಿದ್ದು, ಮಾಲ್ಡೀವ್ಸ್‌ ಸ್ವಾತಂತ್ರ್ಯ ದಿನಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 

Related Articles

error: Content is protected !!