Home » ಭಾರತ-ಬ್ರಿಟನ್‌ ಉಚಿತ ವ್ಯಾಪಾರ ಒಪ್ಪಂದ
 

ಭಾರತ-ಬ್ರಿಟನ್‌ ಉಚಿತ ವ್ಯಾಪಾರ ಒಪ್ಪಂದ

by Kundapur Xpress
Spread the love

ಹೊಸದಿಲ್ಲಿ: ನಾಲ್ಕು ದಿನಗಳ ಬ್ರಿಟನ್ ಮತ್ತು ಮಾಲ್ಡೀವ್ಸ್ ಪ್ರವಾಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬ್ರಿಟನ್‌ಗೆ ತೆರಳಿದ್ದಾರೆ. ಭಾರತ ಮತ್ತು ಬ್ರಿಟನ್ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಬ್ರಿಟನ್‌ಗೆ ಭೇಟಿ ನೀಡುತ್ತಿದ್ದು, ಭಾರತ ಮತ್ತು ಬ್ರಿಟನ್ ನಡುವೆ ಉಚಿತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕುವುದು ಪ್ರಧಾನಿ ಮೋದಿಯವರ ಬ್ರಿಟನ್ ಭೇಟಿಯ ಪ್ರಮುಖ ಅಂಶವಾಗಿದೆ.

3 ವರ್ಷದಿಂದ ಎಫ್‌ಟಿಎ ಚರ್ಚೆ :

ಕಳೆದ 3 ವರ್ಷಗಳಿಂದ ಭಾರತ-ಬ್ರಿಟನ್ ನಡುವಿನ ಉಚಿತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆ ಹಂತದಲ್ಲಿಯೇ ಇತ್ತು. ಉಚಿತ ವ್ಯಾಪಾರ ಒಪ್ಪಂದ ಜಾರಿಗೆ ಬರುವುದರಿಂದ ಭಾರತೀಯ ರಫ್ತುಗಳ ಮೇಲಿನ ಸುಂಕದಲ್ಲಿ ಶೇ.99 ವಿನಾಯಿತಿ ಸಿಗಲಿವೆ. ಇದಲ್ಲದೆ ಬ್ರಿಟನ್ ಆಮದುಗಳ ಮೇಲಿನ ಸುಂಕ ಶೇ.90ರಷ್ಟು ವಿನಾಯಿತಿ ಆಗಲಿದೆ.

 

Related Articles

error: Content is protected !!