ಹೊಸದಿಲ್ಲಿ : ದೇಶಾದ್ಯಂತ 78ನೇ ಸ್ವಾತಂತ್ರ್ಯ ವಿಜೃಂಭಣೆಯಿಂದ ಗುರುವಾರ ನೆರವೇರಲಿದ್ದು ರಾಜಧಾನಿ ದಿಲ್ಲಿಯ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸತತ 11ನೇ ಬಾರಿಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಹಿನ್ನಲೆ ದಿಲ್ಲಿಯಾದ್ಯಂತ ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಮೋದಿಯವರು ಸ್ವಾತಂತ್ರೋತ್ಸವ ಸಮಾರಂಭದಲ್ಲಿ “ ಸರ್ಕಾರದ ಮುಂದಿನ ಸಾಧನೆ, ಯೋಜನೆಗಳು ಮತ್ತು ಮುಖ್ಯವಾಗಿ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಬಗ್ಗೆ ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಮೋದಿ ಅವರು ಸತತ 11ನೇ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಸಿಂಗ್ ಅವರ ದಾಖಲೆ ಮುರಿಯಲಿದ್ದಾರೆ.