141
ಯಮುನಾ ನಗರ : ನರೇಂದ್ರ ಮೋದಿ ಪ್ರಧಾನಿ ಆಗುವವರೆಗೂ ತಾನು ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ 14 ವರ್ಷಗಳಿಂದ ಬರಿಗಾಲಲ್ಲೇ ನಡೆದಾಡುತ್ತಿದ್ದ ಅಭಿಮಾನಿಯೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ಮಾಡಿದರು. ಜೊತೆಗೆ ಆತನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ್ದೂ ಅಲ್ಲದೆ ಆತನಿಗೆ ಒಂದು ಜೊತೆ ಶೂ ಉಡುಗೊರೆ ನೀಡುವ ಮೂಲಕ ಮುಂದೆ ಇಂಥ ಪ್ರತಿಜ್ಞೆ ಮಾಡದಂತೆ ಕಿವಿ ಮಾತು ಹೇಳಿದ್ದಾರೆ.
ರಾಮಪಾಲ್ ಕಶ್ಯಪ್ 14 ವರ್ಷಗಳ ಹಿಂದೆ ಬಿಜೆಪಿಯ ಪ್ರಬಲ ವ್ಯಕ್ತಿ (ಮೋದಿ) ಪ್ರಧಾನಿಯಾದ ನಂತರವೇ ಪಾದರಕ್ಷೆ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರನ್ನು ಭೇಟಿಯಾದ ಮೋದಿ ಹೊಸ ಶೂ ಉಡುಗೊರೆಯಾಗಿ ನೀಡಿದ್ದಾರೆ.

