ಪೋರ್ಟ್ ಲೂಯಿಸ್ : ಭಾರತ ಮತ್ತು ಮಾರಿಷಸ್ ಒಂದೇ ಕುಟುಂಬದಂತೆ ಎಂದು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿಗೆ ಬಂದಾಗಲೆಲ್ಲ ನಮ್ಮದೇ ಸ್ವಂತ ನೆಲದಲ್ಲಿರುವಂತಹ ಭಾವನೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಮಾರಿಷಸ್‌ಗೆ ಎರಡು ದಿನಗಳ ಭೇಟಿ ನೀಡಿರುವ ಮೋದಿ ಅವರಿಗೆ ಅಲ್ಲಿನ ಭಾರತೀಯ ಸಮುದಾಯ ವಿಮಾನ ನಿಲ್ದಾಣದಲ್ಲಿ ಆತ್ಮೀಯತೆಯಿಂದ ಸ್ವಾಗತಿಸಿತು. ಈ ವೇಳೆ ಮಾತನಾಡಿದ ಪ್ರಧಾನಿ, ಇಲ್ಲಿನ ಗಾಳಿ, ಮಣ್ಣು ಮತ್ತು ನೀರಿನಲ್ಲಿ ನಮ್ಮತನವಿದೆ. ಭಾರತ ಹಾಗೂ ಮಾರಿಷಸ್ ನಡುವಿನ ಬಾಂಧವ್ಯ ಪುನರುಚ್ಚರಿಸಿದ ಮೋದಿ, ಉಭಯ ದೇಶಗಳ ದಶಕಗಳಿಂದ ಉತ್ತಮ ಸಂಬಂಧ ಹೊಂದಿದ್ದು ಒಂದೇ ಕುಟುಂಬದಂತಿವೆ ಎಂದರು
10 ವರ್ಷಗಳ ಹಿಂದೆ ಇದೇ ದಿನದಂದು ಮಾರಿಷಸ್ ಗೆ ಭೇಟಿ ನೀಡಿದ್ದೆನು. ಹೋಳಿ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿರುವುದರಿಂದ ಇಲ್ಲಿಂದ ಹೋಳಿ ಬಣ್ಣಗಳನ್ನು ಭಾರತಕ್ಕೆ ಕೊಂಡೊಯ್ಯುವೆ ಎಂದು ತಿಳಿಸಿದರು. ಬಳಿಕ ಸ್ಟೇಟ್‌ಹೌಸ್‌ನಲ್ಲಿ ನಡೆದ ಮಾತುಕತೆ ಸಂದರ್ಭ ಭಾರತ-ಮಾರಿಷಸ್ ನಡುವಣ ವಿಶೇಷವಾದ ನಿಕಟ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಗೋಖಲ್ ಪರಸ್ಪರ ಚರ್ಚಿಸಿದರು. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಣ ಅನ್ನೋನ್ಯತೆಯ ಇತಿಹಾಸ ಮತ್ತು ಬಲವಾದ ಜನ-ಜನ ಸಂಪರ್ಕಗಳನ್ನೂ ಉಭಯ ನಾಯಕರು ನೆನಪಿಸಿಕೊಂಡರು.

