ಅಬುಜಾ : ಆತ್ಮವಿಶ್ವಾಸದ ಭಾರತವು ಹೊಸ ಪಯಣವನ್ನು ಆರಂಭಿಸಿದೆ ಮತ್ತು ವಿಕಸಿತ ಭಾರತ್’ ನಿರ್ಮಿಸುವುದು ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಭಾನುವಾರ ನೈಜೀರಿಯಾದ ರಾಜಧಾನಿಯಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ಬೆಳವಣಿಗೆ, ಶಾಂತಿ, ಸಮೃದ್ದಿ ಮತ್ತು ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವ ಮೂಲಕ ಜಗತ್ತಿಗೆ ಹೊಸ ಭರವಸೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
‘ಸನ್ನು, ನೈಜೀರಿಯಾ’ (ಹಲೋ ನೈಜೀರಿಯಾ) ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ, ‘ನನ್ನ ಮೊದಲ ಭೇಟಿ ಇದು. ಇಲ್ಲಿಒಬ್ಬರೇ ಬರಲಿಲ್ಲ ನಾನು ನನ್ನೊಂದಿಗೆ ಭಾರತೀಯ ಮಣ್ಣಿನ ಪರಿಮಳವನ್ನು ತಂದಿದ್ದೇನೆ. ‘ಭಾರತವು ತನ್ನ ಆರಾಮ ವಲಯದಿಂದ ಹೊರಬಂದಿದೆ ಮತ್ತು ದೇಶವು ಆವಿಷ್ಕಾರ ಗೊಳ್ಳುತ್ತಿದೆ ಮತ್ತು ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.