102
ರಾಮೇಶ್ವರಂ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಮನವಮಿ ಪ್ರಯುಕ್ತ ತಮಿಳುನಾಡಿನ ರಾಮೇಶ್ವರಂನ ಪ್ರಸಿದ್ಧ ರಾಮನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕಳೆದ ವರ್ಷ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಪೂರ್ವದಲ್ಲಿ ಮೋದಿ ರಾಮನಾಥ ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು. ಅದಾದ ವರ್ಷದ ಬಳಿಕ ಮತ್ತೆ ಭೇಟಿ ನೀಡಿದ್ದಾರೆ
ಬಿಳಿ ಪಂಚೆ, ಅಂಗಿ ಮತ್ತು ಅಂಗವಸ್ತ್ರವನ್ನು ತೊಟ್ಟು ಸಾಂಪ್ರದಾಯಿಕ ಪೋಷಾಕಿನಲ್ಲಿ ಬಂದ ಪ್ರಧಾನಿಯವರನ್ನು ದೇವಸ್ಥಾನದ ಅರ್ಚಕರು ಧಾರ್ಮಿಕ ರೀತ್ಯಾ ಸ್ವಾಗತಿಸಿದರು. ಆ ಬಳಿಕ ಪ್ರಧಾನಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಕೇಂದ್ರ ಸಚಿವ ಎಲ್. ಮುರುಗನ್ ಹಾಗೂ ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಉಪಸ್ಥಿತರಿದ್ದರು.

