ಹೊಸದಿಲ್ಲಿ : ದೇಶದ 95 ಕೋಟಿ ಜನರಿಂದು ಒಂದಲ್ಲ ಒಂದು ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2015ರ ಮುನ್ನ ಈ ಸಂಖ್ಯೆ 25 ಕೋಟಿಗೂ ಕಡಿಮೆಯಿತ್ತು. ಭಾರತದ ಶೇ.64 ಕ್ಕಿಂತಲೂ ಅಧಿಕ ಮಂದಿ ಖಚಿತವಾಗಿ ಒಂದಲ್ಲ ಒಂದು ಸಾಮಾಜಿಕ ಸುರಕ್ಷಾ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಇತ್ತೀಚಿನ ವರದಿ ಹೇಳಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಿಂಗಳ ಮನ್ ಕಿ ಬಾತ್ ನಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.
ಜಗತ್ತಲ್ಲಿ ಅತ್ಯಧಿಕ ವ್ಯಾಪ್ತಿ ಹೊಂದಿರುವ ಯೋಜನೆಗಳ ಪೈಕಿ ಸಾಮಾಜಿಕ ಸುರಕ್ಷೆ ಒಂದಾಗಿದೆ. ಸ್ವಾಸ್ಥ್ಯ ರಂಗದಿಂದ ಹಿಡಿದು ಸಾಮಾಜಿಕ ಭದ್ರತೆಯವರೆಗೂ ಪ್ರತಿಯೊಂದು ರಂಗದಲ್ಲೂ ಪರಿಪೂರ್ಣತೆ ಸಾಧಿಸುವ ಸಂಕಲ್ಪದೊಂದಿಗೆ ಭಾರತ ದಾಪುಗಾಲಿಟ್ಟಿದೆ ಎಂದು ಪ್ರಧಾನಿ ಗಮನ ಸೆಳೆದರು.
ಸಾಮಾಜಿಕ ನ್ಯಾಯದಾನ:
ದಕ್ಷ ಸಾಮಾಜಿಕ ನ್ಯಾಯದಾನದ ಸ್ಪಷ್ಟ ಚಿತ್ರಣ ಇದಾಗಿದೆ. ಮುಂದಿನ ದಿನಗಳು ಇನ್ನಷ್ಟು ಉತ್ತಮವಾಗಿರುವ ಭರವಸೆಯನ್ನು ಕೂಡ ಇದು ನಮಗೆ ನೀಡಿದೆ. ಹೆಜ್ಜೆ ಹೆಜ್ಜೆಗೂ ಭಾರತ ಮತ್ತಷ್ಟು ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು.

