97
ಪೋರ್ಟ್ ಲೂಯಿಸ್ : ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಮಾರಿಷಸ್ ರಾಷ್ಟ್ರೀಯ ದಿನದಂದು ಮುಖ್ಯ ಅತಿಥಿಯಾಗಿದ್ದು, 2 ದಿನಗಳ ಕಾಲ (ಮಾ.11 ಹಾಗೂ 12) ಆ ದೇಶದ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಮಾರಿಷಸ್ ಅಧ್ಯಕ್ಷ ನವೀನ್ ರಾಮಗುಲಾಂ ಸಂಸತ್ತಿನಲ್ಲಿ ಹೇಳಿಕೆ ನೀಡಿ ನನ್ನ ಆಮಂತ್ರಣವನ್ನು ಸ್ವೀಕರಿಸಿ ಮೋದಿ, 57ನೇ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದು ಉಭಯ ದೇಶಗಳ ನಡುವಿನ ಸ್ನೇಹದ ಸಂಕೇತ ಎಂದಿದ್ದಾರೆ. 1968ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನೆನಪಾರ್ಥ ಮಾ.12ನ್ನು ಮಾರಿಷಸ್ ರಾಷ್ಟ್ರೀಯ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ.

