ನವದೆಹಲಿ : 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅ. 22, 23ರಂದು ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರ ಗಳೊಂದಿಗೆ ಮತ್ತು ಕಝಾನದ ನಾಯಕರೊಂದಿಗೆ ದ್ವಿಪಕ್ಷೀ ಯ ಮಾತುಕತೆ ನಡೆಸುವ ಸಾ ಧ್ಯತೆಯಿದೆ ಎಂದು ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಈ ವರ್ಷ ಬ್ರಿಕ್ಸ್ ಶೃಂಗ ಸಭೆಯು, ಜಾಗತಿಕ ಅಭಿವೃದ್ಧಿ ಮತ್ತು ಭದ್ರ ತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು’ ಎನ್ನುವ ಥೀಮ್ನಲ್ಲಿ ನಡೆಯಲಿದೆ.