104
ಕೊಲಂಬೊ : ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 5 ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ ಸಂಸತ್ತಿನಲ್ಲಿ ಘೋಷಿಸಿದ್ದಾರೆ. ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತಾ ಹೆರಾತ್, ಕಳೆದ ವರ್ಷ ಅಧ್ಯಕ್ಷ ಡಿಸಾನಾಯಕೆ ದಿಲ್ಲಿಗೆ ಭೇಟಿ ನೀಡಿದಾಗ ಮಾಡಿಕೊಂಡ ಒಪ್ಪಂದಗಳನ್ನು ಅಂತಿಮಗೊಳಿಸಲು ಮೋದಿ ಇಲ್ಲಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದರು.
ಮೋದಿ ಭೇಟಿಯ ಸಂದರ್ಭದಲ್ಲಿ ಪೂರ್ವ ಬಂದರು ಜಿಲ್ಲೆಯ ತ್ರಿಂಕೋಮಾಲಿಯಲ್ಲಿರುವ ಸಂಪೂರ್ ವಿದ್ಯುತ್ ಸ್ಥಾವರದ ನಿರ್ಮಾಣ ಕಾರ್ಯವೂ ಪ್ರಾರಂಭವಾಗಲಿದೆ. ದೇಶದ ಸ್ಥಿರತೆಗಾಗಿ ಮೋದಿ ಶ್ರೀಲಂಕಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ದಿಸಾನಾಯಕೆ ಹೇಳಿದರು. ಕಳೆದ ತಿಂಗಳು, ದ್ವೀಪ ರಾಷ್ಟ್ರದಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ.

