Home » ಭಾಂಧವ್ಯ ಭದ್ರಗೊಳಿಸಲು ಮೋದಿ-ತಮೀಮ್‌ ನಿರ್ಧಾರ
 

ಭಾಂಧವ್ಯ ಭದ್ರಗೊಳಿಸಲು ಮೋದಿ-ತಮೀಮ್‌ ನಿರ್ಧಾರ

by Kundapur Xpress
Spread the love

ಹೊಸದಿಲ್ಲಿ : ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಇಂಧನ, ಆಹಾರ ಭದ್ರತೆ, ಸಂಸ್ಕೃತಿ ರಂಗಗಳಿಗೆ ಪ್ರಮುಖ ಆದ್ಯತೆ ಮತ್ತು ಬಾಂಧವ್ಯ ಕೊಂಡಿಯ ಬಲವರ್ಧನೆಗೆ ಪ್ರಾಧಾನ್ಯತೆಯೊಂದಿಗೆ, ಭಾರತ-ಖತಾರ್ ಸಂಬಂಧಗಳನ್ನು ವ್ಯೂಹಾತ್ಮಕ ಪಾಲುದಾರಿಕೆಗೆ ಎತ್ತರಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಖತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ನಿರ್ಧರಿಸಿದ್ದಾರೆ

ಮಂಗಳವಾರ ಉಭಯ ನಾಯಕರು ವ್ಯಾಪಕ ಮಾತುಕತೆಗಳ ಬಳಿಕ ಈ ನಿರ್ಧಾರ ಕೈಗೊಂಡರು. ಎರಡೂ ರಾಷ್ಟ್ರಗಳ ನಡುವಣ ಸಾಂಪ್ರದಾಯಿಕವಾದ ಮತ್ತು ಗಾಢವಾದ ಬಾಂಧವ್ಯ ಮತ್ತಷ್ಟು ಸದೃಢಗೊಳಿಸಲು ಉಭಯ ನಾಯಕರು ತೀರ್ಮಾನಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಪರಸ್ಪರ ಹಿತಾಸಕ್ತಿಯ ಅಭಿಪ್ರಾಯಗಳನ್ನು ಮೋದಿ ಮತ್ತು ತಮೀಮ್ ವಿನಿಮಯ ಮಾಡಿಕೊಂಡರೆಂದು ವಿದೇಶ ವ್ಯವಹಾರಗಳ ಖಾತೆ ತಿಳಿಸಿದೆ

 

Related Articles

error: Content is protected !!