Home » ಜಪಾನ್‌ ಬುಲೆಟ್‌ ರೈಲಲ್ಲಿ ಮೋದಿ 300 ಕಿಮೀ. ಪ್ರಯಾಣ
 

ಜಪಾನ್‌ ಬುಲೆಟ್‌ ರೈಲಲ್ಲಿ ಮೋದಿ 300 ಕಿಮೀ. ಪ್ರಯಾಣ

by Kundapur Xpress
Spread the love

ಟೋಕಿಯೋ : ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಗೆರು ಇಷಿಬಾ ಅವರು ಶನಿವಾರ ಜಪಾನ್ ರಾಜಧಾನಿ ಟೋಕಿಯೋದಿಂದ 300 ಕಿ ಮೀ. ದೂರದಲ್ಲಿರುವ ಸೆಂಡೈವರೆಗೆ ಬುಲೆಟ್ ರೈಲಿನ ಮೂಲಕ ಪ್ರಯಾಣ ಮಾಡಿದರು.

ಈ ಬಳಿಕ ಜಪಾನ್‌ನಲ್ಲಿ ಬುಲೆಟ್ ರೈಲಿನ ತರಬೇತಿ ಪಡೆಯುತ್ತಿರುವ ಭಾರತೀಯ ಚಾಲಕರ ಜತೆ ಮೋದಿ ಅವರು ಮಾತುಕತೆ ನಡೆಸಿದರು. ಇದೇ ವೇಳೆ ಆಲ್ಪಾ-ಎಕ್ಸ್‌ ಮಾದರಿಯ ಬುಲೆಟ್ ರೈಲನ್ನು ವೀಕ್ಷಿಸಿದರು. ಬಳಿಕ ತಮ್ಮ ಅನುಭವವನ್ನು ಉಭಯ ನಾಯಕರು ಎಕ್ಸ್ ಮೂಲಕ ಹಂಚಿಕೊಂಡು ಸಂತಸ ಹೊರಹಾಕಿದರು

ಭಾರತದಲ್ಲಿ ಜಪಾನ್ ಸಹಯೋಗದಲ್ಲಿ ಅಹಮದಾಬಾದ್-ಮುಂಬೈ ಬುಲೆಟ್. ರೈಲು ಮಾರ್ಗ ನಿರ್ಮಾಣ ಆಗುತ್ತಿದ್ದು, ಈ ನಿಮಿತ್ತ ಭಾರತದ ಚಾಲಕರು ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ.

 

Related Articles

error: Content is protected !!