Home » ಸಿಂದೂರದಿಂದ ಭಾರತದ ಬಲ ವಿಶ್ವಕ್ಕೆ ಮನವರಿಕೆ
 

ಸಿಂದೂರದಿಂದ ಭಾರತದ ಬಲ ವಿಶ್ವಕ್ಕೆ ಮನವರಿಕೆ

ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಮೋದಿ ಭೇಟಿ

by Kundapur Xpress
Spread the love

ಗಂಗೈಕೊಂಡ ಚೋಳಪುರಂ : ದೇಶದ ಸಾರ್ವಭೌಮತೆಗೇನಾದರು ತೊಂದರೆಯಾದಲ್ಲಿ ಭಾರತ ಯಾವ ರೀತಿ ಎದುರೇಟು ನೀಡಲಿದೆ ಎಂಬುದನ್ನು ಆಪರೇಷನ್ ಸಿಂದೂರ್ ಇಡೀ ಜಗತ್ತಿಗೆ ಮನವರಿಕೆ ಮಾಡಿದೆ. ಗಡಿಯಾಚೆಯ ಮಿಲಿಟರಿ ಕಾರ್ಯಾಚರಣೆ ದೇಶಾದ್ಯಂತ ಹೊಸ ಆತ್ಮವಿಶ್ವಾಸವನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಲ್ಲೂ ಸುರಕ್ಷಿತ ಸ್ವರ್ಗ ಇಲ್ಲ ಎಂಬ ಸಂದೇಶವನ್ನು ಆಪರೇಶನ್ ಸಿಂದೂರ್ ಭಾರತವನ್ನು ಟಾರ್ಗೆಟ್ ಮಾಡುವ ಶತ್ರುಗಳಿಗೆ ಹಾಗೂ ಭಯೋತ್ಪಾದಕರಿಗೆ ನೀಡಿದೆ ಎಂದು ಪ್ರಧಾನಿ ಮೋದಿ ಗುಡುಗಿದರು. ಚೋಳ ದೊರೆ ರಾಜೇಂದ್ರ ಚೋಳ-1 ಅವರ ಹುಟ್ಟುಹಬ್ಬ ಸಮಾರಂಭ ಆದಿ ತಿರುವಾಧಿರೈ ಮೇಳದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು.

ದೊರೆಗಳಾದ ರಾಜ ರಾಜ ಚೋಳ ಮತ್ತು ಇವರ ಪುತ್ರ ರಾಜೇಂದ್ರ ಚೋಳ -1 ಹೆಸರುಗಳು ಭಾರತದ ಅಸ್ಮಿತೆ ಮತ್ತು ಘನತೆಗೆ ಪರ್ಯಾಯವಾಗಿವೆ. ತಮಿಳುನಾಡಿನಲ್ಲಿ ಇವರ ಬೃಹತ್‌ ಪ್ರತಿಮೆಗಳನ್ನು ನಿರ್ಮಿಸಲಾಗುವುದು ಮತ್ತು ಈ ಪ್ರತಿಮೆಗಳು ನಮ್ಮ ಚಾರಿತ್ರಿಕ ಜಾಗೃತಿಯ ಆಧುನಿಕ ಸ್ತಂಭಗಳಾಗಲಿವೆಂದು ಮೋದಿ ಹೇಳಿದ್ದಾರೆ. 

 

Related Articles

error: Content is protected !!