Home » ಸ್ಮೃತಿ ಮಂದಿರ ಹಾಗೂ ದೀಕ್ಷಭೂಮಿಗೆ ಮೋದಿ ಭೇಟಿ
 

ಸ್ಮೃತಿ ಮಂದಿರ ಹಾಗೂ ದೀಕ್ಷಭೂಮಿಗೆ ಮೋದಿ ಭೇಟಿ

by Kundapur Xpress
Spread the love

ನಾಗ್ಪುರ : ಪ್ರಧಾನಿ ಮೋದಿ ನಿನ್ನೆ ಬೆಳಿಗ್ಗೆ 9.00 ಗಂಟೆ ಸುಮಾರಿಗೆ ನಾಗ್ಪುರಕ್ಕೆ ಆಗಮಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರ ಸಂಪುಟದ ಇತರ ಸಚಿವರು ನಾಗ್ಪುರ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ನಾಗ್ಪುರದ ದೀಕ್ಷಭೂಮಿಗೆ ಭೇಟಿ ನೀಡಿದ್ದಾರೆ. 1956 ರಲ್ಲಿ ಭಾರತೀಯ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕ‌ರ್ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡ ಸ್ಥಳ ಇದಾಗಿದೆ. ದೀಕ್ಷಭೂಮಿಯಲ್ಲಿರುವ ಬುದ್ಧನ ಪ್ರತಿಮೆಗೂ ಪ್ರಧಾನಿ ಪ್ರಾರ್ಥನೆ ಸಲ್ಲಿಸಿದರು. ದೀಕ್ಷಭೂಮಿಯ ಸನ್ಯಾಸಿಗಳು ಪ್ರಧಾನ ಮಂತ್ರಿಯವರಿಗೆ ಪುಷ್ಪಗುಚ್ಛ ಮತ್ತು ಶಾಲು ನೀಡಿ ಸನ್ಮಾನಿಸಿದರು.

ಇದಕ್ಕೂ ಮೊದಲು, ಪ್ರಧಾನಿ ಮೋದಿ ನಾಗ್ಪುರದ ರೇಶಿಂಬಾಗ್‌ನಲ್ಲಿರುವ ಸ್ಮೃತಿ ಮಂದಿರದಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡ್ಗೇವಾ‌ರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಅವರ ಜೊತೆ ಆರ್‌ಎಎಸ್‌ ಸರಸಂಘಚಾಲಕರಾದ ಮೋಹನ್ ಭಾಗವತ್‌, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು

 

Related Articles

error: Content is protected !!