Home » ಭಾರತ ಮಾಲ್ಡೀವ್ಸ್‌ ಸಂಬಂಧ ಸಮುದ್ರದಷ್ಟು ಆಳ
 

ಭಾರತ ಮಾಲ್ಡೀವ್ಸ್‌ ಸಂಬಂಧ ಸಮುದ್ರದಷ್ಟು ಆಳ

ಪ್ರಧಾನಿ ಮೋದಿ

by Kundapur Xpress
Spread the love

ಮಾಲೆ : ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದು ಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್‌ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪ ದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು ಕಂಡಿದ್ದು, ಉಭಯ ದೇಶಗಳ ಮಧ್ಯೆ ಸ್ನೇಹದ ಬೆಸುಗೆ ಏರ್ಪಟ್ಟಿದೆ. ಇದರ ದ್ಯೋತಕವಾಗಿ ಮೋದಿ 4,850 ಕೋಟಿ ರು. ಸಾಲವನ್ನು ಮಾಲ್ಡೀವ್ಸ್‌ ಗೆ ಘೋಷಿಸಿದ್ದಾರೆ.

ಬ್ರಿಟನ್ ಪ್ರವಾಸ ನಡೆಸಿದ್ದ ಮೋದಿ ಶುಕ್ರವಾರ ಮಧ್ಯಾಹ್ನ ಮಾಲೆಯ ವೆಲೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ಈ ವೇಳೆ, ಈ ಹಿಂದೆ ಭಾರತದ ವಿರುದ್ಧ ಕೆಂಡ ಕಾರಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರೇ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಿದ್ಯಾರ್ಥಿಗಳು ಕೂಡ ಭಾರತೀಯ ಸಾಂಪ್ರದಾಯಿಕ ನೃತ್ಯದ ಮೂಲಕ ವಿಶೇಷ ಸ್ವಾಗತ ಕೋರಿದರು

 

Related Articles

error: Content is protected !!