215
ಪುಣೆ : ‘ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು’ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದಾರೆ.” ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆ ವೇಳೆ ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಜು.19ರಂದೂ ಭಾಗವತ್, ‘ಒಬ್ಬ ವ್ಯಕ್ತಿಯು ‘ಸೂಪರ್‌ಮ್ಯಾನ್’ ಆಗಲು ಬಯಸಬಹುದು. ನಂತರ ‘ದೇವತೆ’ ಮತ್ತು ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಹಾತೊರೆಯಬಹುದು. ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ’ ಎಂದು ಹೇಳಿದ್ದರು. . ಇದಾದ ನಂತರ ಭಾಗವತ್ ಅವರು ಅಂಥದ್ದೇ ಹೇಳಿಕೆ ನೀಡುತ್ತಿರುವುದು 2ನೇ ಬಾರಿ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಮೋದಿ ಹಾಗೂ ಆರೆಸ್ಸೆಸ್ ಸಂಬಂಧ ಲೋಕಸಭೆ ಚುನಾವಣೆ ನಂತರ ಹಾಳಾಗುತ್ತಿರುವ ಸಂಕೇತ ಇದು ಎಂದಿದ್ದಾರೆ

