106
ಗುವಾಹಟಿ : ಹಿಂದು ಸಮಾಜ ಒಗ್ಗಟ್ಟಾಗಬೇಕಾದ ಅನಿವಾರ್ಯತೆಯನ್ನು ಪುನರ್ ಪ್ರತಿಪಾದಿಸಿರುವ ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗ್ವತ್, ವಿದೇಶಿ ಭಾಷಾ ವ್ಯಾಮೋಹ ತೊರೆದು, ಮಾತೃಭಾಷೆಯನ್ನು ಮನೆ ಸಹಿತ ನಿತ್ಯ ಬದುಕಲ್ಲಿ ಹೆಚ್ಚು ಬಳಸುವಂತೆ ಜನರಿಗೆ ಕರೆಯಿತ್ತಿದ್ದಾರೆ.
ಗುವಾಹಟಿಗೆ ನೆರೆಯ ಬರ್ಸಪಾರಾದ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಮಾಜದ ಒಳಿತಿಗಾಗಿ ಮಿಂಚಿನ ವೇಗದಿಂದ ದುಡಿಯುವವರು ಸಂಘದ ಸ್ವಯಂಸೇವಕರು. ಆರೆಸ್ಸೆಸ್‌ನ ಸ್ವರೂಪವೇ ವಿಶಿಷ್ಟವಾದುದು ಎಂದು ಬಣ್ಣಿಸಿದ ಭಾಗ್ವತ್, ಸ್ವಯಂಸೇವಕರು ತಮ್ಮ ಸಮಯ, ಪ್ರಯತ್ನ ಸಹಿತ ಎಲ್ಲವನ್ನು ಸನಾತನ ಸಂಸ್ಕೃತಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಮೀಸಲಿಡಲು ಆರೆಸ್ಸೆಸ್‌ನ ವಿಶಿಷ್ಟತೆಗಳೇ ಪ್ರೇರಣೆ ಎಂದರು

