179
ಮುಂಬೈ : ಉತ್ತರ ಪ್ರದೇಶದ ಬಳಿಕ ಮಹಾರಾಷ್ಟ್ರದಲ್ಲೂ ಗಲಭೆಕೋರರ ವಿರುದ್ಧ ಬುಲ್ಲೋಜರ್ ಕಾರ್ಯಾಚರಣೆ ನಡೆದಿದೆ. ನಾಗ್ಪುರದಲ್ಲಿ ಕೋಮು ಗಲಭೆ ನಡೆದ ಒಂದು ವಾರದ ನಂತರ ಜೆಸಿಬಿ ಯಂತ್ರಗಳು ಕೋಮು ಗಲಭೆಯ ರೂವಾರಿ ಎಂದು ಹೇಳಲಾಗುವ ಫಾಹಿಮ್ ಖಾನ್ ಗೆ ಸೇರಿದ ಮನೆಯನ್ನು ಸೋಮವಾರ ಧ್ವಂಸಗೊಳಿಸಿದವು.
ಮಹಾರಾಷ್ಟ್ರದ ಗೃಹ ಸಚಿವರೂ ಆಗಿರುವ ಸಿಎಂ ದೇವೇಂದ್ರ ಫಡ್ನವೀಸ್, ಆರೋಪಿಗಳಿಂದ ಆಗಿರುವ ಹಾನಿಯನ್ನು ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದ 2 ದಿನಗಳ ನಂತರ ಈ ಕ್ರಮ ಜರುಗಿಸಲಾಗಿದೆ.

ತಡೆಯಾಜ್ಞೆ ಮುನ್ನವೇ ಆರೋಪಿಯ ಮನೆ ಧ್ವಂಸ
ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಸೋಮವಾರ ಹಿಂಸಾಚಾರ ಪ್ರಕರಣದಲ್ಲಿ ಫಾಹಿಮ್ ಖಾನ್ ಸೇರಿದಂತೆ ಇಬ್ಬರು ಆರೋಪಿಗಳ ಮನೆಗಳ ಧ್ವಂಸಕ್ಕೆ ತಡೆಯಾಜ್ಞೆ ನೀಡಿತು. ಮಧ್ಯಾಹ್ನ ಹೈಕೋರ್ಟ್ ಆದೇಶ ಹೊರಡಿಸುವ ಮೊದಲು ಖಾನ್‌ಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಧ್ವಂಸಗೊಳಿಸಲಾಯಿತು

