69
ಬಿಜಾಪುರ : ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತೊಂದು ಯಶ ಕಂಡಿದ್ದು, ಛತ್ತೀಸ್‌ಗಢ ಭದ್ರತಾ ಪಡೆಗಳು ಗುರುವಾರ ನಕ್ಸಲ್ ನಾಯಕ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯ ಸುಧಾಕರ್‌ನನ್ನು (66) ಹತ್ಯೆ ಮಾಡಿವೆ.
ರಾಜ್ಯದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಘಟನೆ ನಡೆದಿದೆ. ಅನೇಕ ನರಮೇಧದಲ್ಲಿ ಭಾಗಿ ಆಗಿದ್ದ ಟೆಂಟು ಲಕ್ಷ್ಮಿನರಸಿಂಹ ಚಲಂ ಅಲಿಯಾಸ್ ಗೌತಮ್ ಅಥವಾ ಸುಧಾಕರ್’ ಅಲಿಯಾಸ್ ಸೋಮಣ್ಣನ ತಲೆಗೆ 40 ಲಕ್ಷ ರು. ಬಹುಮಾನವಿತ್ತು. ದೇಶದ ನಂ.1 ನಕ್ಸಲ್ ನಾಯಕ ಬಸವರಾಜು ಹತ್ಯೆ ಆದ ಕೆಲವೇ ದಿನಗಳಲ್ಲಿ ಈತ ಹೆಣವಾಗಿದ್ದಾನೆ

