ರಾಯ್ಪುರ : ಛತ್ತೀಸ್ಗಢದ ಸುಕ್ಕಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ಭದ್ರತಾ ಪಡೆಗಳು ನಕ್ಸಲೀಯರಿಗೆ ಸೇರಿದ ನಕಲಿ ನೋಟುಗಳು ಮತ್ತು ಅವುಗಳನ್ನು ಮುದ್ರಿಸಲು ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ
ನಕ್ಸಲೀಯರು ಬಸ್ತಾರ್ ಪ್ರದೇಶದ ಹಳ್ಳಿಗಳಲ್ಲಿ ವಾರದ ಸಂತೆಗಳಲ್ಲಿ ಮುಗ್ಧ ಬುಡಕಟ್ಟು ಜನರನ್ನು ವಂಚಿಸಿ, ನಕಲಿ ನೋಟುಗಳನ್ನು ತುಂಬಾ ಸಮಯದಿಂದ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಅವರು ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಕ್ಕಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ. ಚವಾಣ್ ಹೇಳಿದ್ದಾರೆ