Home » ಭಾರತ ಪ್ರತಿದಾಳಿಗೆ ನೂರ್ ಖಾನ್ ವಾಯುನೆಲೆ ಹಾನಿ
 

ಭಾರತ ಪ್ರತಿದಾಳಿಗೆ ನೂರ್ ಖಾನ್ ವಾಯುನೆಲೆ ಹಾನಿ

by Kundapur Xpress
Spread the love

ಹೊಸದಿಲ್ಲಿ : ಭಾರತ ನಡೆಸಿದ ಪರಿಣಾಮಕಾರಿ ಪ್ರತಿದಾಳಿಯಿಂದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಹಾನಿಯಾಗಿದ್ದನ್ನು ಚೀನಾ ಬಿಡುಗಡೆಗೊಳಿಸಿದ ಉಪಗ್ರಹ ಚಿತ್ರಗಳಿಂದ ಬಹಿರಂಗವಾಗಿದೆ. ರಾವಲ್ಲಿಂಡಿ ನಗರದಲ್ಲಿರುವ ಪಾಕಿಸ್ತಾನಿ ಸೇನೆ ಪ್ರಧಾನ ಕಚೇರಿ ಸಮೀಪದಲ್ಲಿರುವ ನೂರ್ ಖಾನ್ ವಾಯುನೆಲೆಗೆ ಹಾನಿಯಾಗಿದೆ. ಮೇ 8ರಿಂದ 10ರೊಳಗೆ ಭಾರತೀಯ ಸೇನೆ, ವಾಯುಸೇನೆ ಜಂಟಿಯಾಗಿ ನಡೆಸಿದ ಆಪರೇಷನ್ ಸಿಂದೂರ್ ಪ್ರತಿದಾಳಿ ವೇಳೆ ನೂರ್ ಖಾನ್ ವಾಯುನೆಲೆ ಮೂಲ ಸೌಕರ್ಯ ಮತ್ತು ವಾಹನಗಳಿಗೆ ಹಾನಿಯಾಗಿರುವುದು ಚೀನಾ ಉಪಗ್ರಹ ಬಿಡುಗಡೆಗೊಳಿಸಿದ ಚಿತ್ರಗಳಿಂದ ತಿಳಿದುಬಂದಿದೆ

ಮೇ 10ರಂದು ರಹೀಮ್ ಯಾರ್ ಖಾನ್ ವಾಯುನೆಲೆ ಮೇಲೆ ಭಾರತ ದಾಳಿ ನಡೆಸಿದ್ದು, ಅಲ್ಲಿದ್ದ ಏಕೈಕ ರನ್‌ವೇ ಹಾನಿಗೊಂಡಿದೆ.  ಪಾಕಿಸ್ತಾನದ ಸಿಂಥ್ ಪ್ರಾಂತ್ಯದಲ್ಲಿರುವ ಭೋಲಾರಿ ವಾಯುನೆಲೆಗೆ ಭಾರತ ನಡೆಸಿದ ಬ್ರಹ್ಮಸ್ ಸೂಪರ್ ಸೋನಿಕ್ ಕ್ರೂಸ್ ಕ್ಷಿಪಣಿ ದಾಳಿಯಿಂದ ಹಾನಿಯಾಗಿದೆ ಎಂದು ಭಾರತದ ಕಾವಾಸ್ಪೇಸ್ ಸಂಸ್ಥೆ ಉಪಗ್ರಹ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

 

Related Articles

error: Content is protected !!