60
ನವದೆಹಲಿ : ನೈಜ ಹಣಬಳಸಿ ಆಡುವ ಎಲ್ಲಾ ರೀತಿಯ ಆನ್ ಲೈನ್ ಗೇಮ್‌ಗಳನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ-2025 ವಿಧೇಯಕವು ಬುಧವಾರ ಲೋಕಸಭೆ ಯಲ್ಲಿ ಅಂಗೀಕಾರಗೊಂಡಿದೆ.
ಹೆಚ್ಚುತ್ತಿರುವ ಆನ್‌ಲೈನ್ ಗೇಮ್ ಚಟ, ಅಕ್ರಮ ಹಣ ವರ್ಗಾವಣೆ ಮತ್ತು ಆ್ಯಪ್‌ಗಳ ಮೂಲಕ ನಡೆಯುತ್ತಿರುವ ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶ ದಿಂದ : ಕೇಂದ್ರ ಸರ್ಕಾರ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
ಈ ವಿಧೇಯಕವು ಆನ್‌ಲೈನ್ ಗೇಮ್‌ಗಳ ನಿರ್ವಹಣೆ, ವೇದಿಕೆ ಕಲ್ಪಿಸುವುದು, ಜಾಹೀರಾತು, ಇವುಗಳ ಯಾವುದೇ ಹಣಕಾಸು ಸಂಸ್ಥೆಗಳ ಮೂಲಕ ಇಂಥ ಗೇಮ್‌ಗಳಿಗೆ ಹಣದ ವರ್ಗಾವಣೆ ನಿಷೇಧಿಸುತ್ತದೆ.
ವಿಧೇಯಕದಲ್ಲೇನಿದೆ ? :
ಆನ್‌ಲೈನ್ ಬೆಟ್ಟಿಂಗ್, ಜೂಜಾಟಗಳಿಗೆ ಸಂಪೂರ್ಣ ನಿಷೇಧ. ಅಂದರೆ ಫ್ಯಾಂಟಸಿ ಸ್ಪೋರ್ಟ್ಸ್, ಪೋಕರ್, ರಮ್ಮಿ ಮತ್ತು ಇತರೆ ಕಾರ್ಡ್ ಗೇಮ್ ಸೇರಿ ಹಣ ಹಾಕಿ ಆಡುವ ಎಲ್ಲಾ ರೀತಿಯ ಗೇಮ್ಸ್ ಗಳನ್ನು ನಿರ್ಬಂಧಿಸುತ್ತದೆ. ಆರೋಪಿ ಗಳಿಗೆ 3 ವರ್ಷದ ವರೆಗೆ ಜೈಲು, 1 ಕೋಟಿ ವರೆಗೆ ದಂಡ ವಿಧಿಸಲು ಅವಕಾಶ ಮಾಡಿಕೊಡುತ್ತದೆ.

