Home » ಸಿಂದೂರ ಪ್ರತೀಕಾರ : ಉಗ್ರ ನೆಲೆಗಳಿಗೆ ಭಾರತ ಬಾಂಬ್
 

ಸಿಂದೂರ ಪ್ರತೀಕಾರ : ಉಗ್ರ ನೆಲೆಗಳಿಗೆ ಭಾರತ ಬಾಂಬ್

ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉಗ್ರ ಬೇಟೆ , 80 ಉಗ್ರರು ಫಿನಿಶ್

by Kundapur Xpress
Spread the love

ನವದೆಹಲಿ : ಪಹಲ್ಲಾಂ ದಾಳಿಕೋರರು, ಅವರ ಸೂತ್ರಧಾರರು ಊಹಿಸಲೂ ಆಗದ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ, ಅವರು ಎಲ್ಲಿದ್ದರೂ ಹುಡುಕಿ ಹುಡುಕಿ ಶಿಕ್ಷಿಸುತ್ತೇವೆಂದು ಶಪಥ ಮಾ ಡಿದ್ದ ಭಾರತ ಹೇಳಿದಂತೆ ನಡೆದುಕೊಂಡಿದೆ. ಪಾಕಿಸ್ಥಾನದಲ್ಲಿರುವ ಉಗ್ರ ನೆಲೆಗಳ ಮೇಲೆ ರಾತ್ರೋರಾತ್ರಿ ‘ಆಪರೇಷನ್ ಸಿಂದೂರ ಹೆಸರಿನಲ್ಲಿ ವೈಮಾನಿಕ ದಾಳಿ ನಡೆಸಿ ಶತ್ರು ದೇಶಕ್ಕೆ ಭರ್ಜರಿ ಭರ್ಜರಿ ಆಘಾತ ನೀಡಿದೆ.

ಮಂಗಳವಾರ ತಡರಾತ್ರಿ 1.05ರಿಂದ 1.30ರ ನಡುವೆ 25 ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ದಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಬ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳ 9 ನೆಲೆಗಳನ್ನು 24 ಕಿಪಣಿ ಬಳಸಿ ಧ್ವಂಸ ಮಾಡಲಾಗಿದೆ. ದಾಳಿಯಲ್ಲಿ ಸುಮಾರು 80 ಮಂದಿ ಬಲಿಯಾಗಿದ್ದಾರೆ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಭಾರತದ ವಿರುದ್ಧ ಭಯೋತ್ಪಾದಕರನ್ನು ಛೂ ಬಿಡುವ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥನೂ ಆಗಿರುವ ಉಗ್ರ ಮಸೂದ್ ಅಜರ್‌ನ ಹಿರಿಯ ಸೋದರಿ ಮತ್ತು ಕುಟುಂಬದ 10 ಮಂದಿಯೂ ಸೇರಿದ್ದಾರೆ. – ಭಾರತೀಯ ಸೇನೆಯ ಮೂರೂ ದಳಗಳು ಜಂಟಿಯಾಗಿ ಈ ಆಪರೇಷನ್ ಸಿಂದೂರವನ್ನು ಕಾರ್ಯರೂಪಕ್ಕಿಳಿಸಿದ್ದು, ಭಾರತದ ವಾಯು ಪ್ರದೇಶದಿಂದಲೇ ವಿಮಾನಗಳ ಮೂಲಕ ಪಾಕಿಸ್ತಾನದಲ್ಲಿರುವ 9 ಗುರಿಗಳನ್ನು ಕ್ಷಿಪಣಿ ಬಳಸಿ ಪುಡಿಗಟ್ಟಲಾಗಿದೆ. ದಾಳಿಗೊಳಗಾದ ಒಂಬತ್ತರಲ್ಲಿ 5 ಗುರಿಗಳು ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರ ವ್ಯಾಪ್ತಿಗೆ ಸೇರಿದ್ದರೆ, ಇನ್ನುಳಿದ ನಾಲ್ಕು ಸ್ಥಳಗಳು ಪಾಕಿಸ್ತಾನದೊಳಗಿನವಾಗಿವೆ. ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ಆಚೆಗೂ ಭಾರತ ದಾಳಿ ನಡೆಸಿದ್ದು 1971ರ ಯುದ್ಧದ ಬಳಿಕ ಇದೇ ಮೊದಲು

ಉಗ್ರ ನೆಲೆಗಳಿಗೆ ಭಾರಿ ಹಾನಿ :

ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್‌ನ ಕೇಂದ್ರ ಸ್ಥಾನ ಬಹಾವುರ ಮತ್ತು ಲಷ್ಕರ್-ಎ-ತೊಯ್ದಾದ ಕೇಂದ್ರ ಸ್ಥಳ ಮುರೀದ್‌ ಉಗ್ರ ನೆಲೆಗಳಿಗೆ ಭಾರೀ ಹಾನಿಯಾಗಿದ್ದು, ಮುಂಬೈ ದಾಳಿಕೋರರಾದ ಅಜ್ಜಲ್ ಕಸಬ್ ಮತ್ತು ಡೇವಿಡ್ ಹೆಡ್ಲಿಗೆ ಇಲ್ಲೇ ತರಬೇತಿ ನೀಡಲಾಗಿತ್ತು ಎಂದು ಸೇನೆ ಸಷ್ಟಪಡಿಸಿದೆ. ಇಡೀ ದಾಳಿಯ ಮೇಲೆ ಪ್ರಧಾನಿ ಮೋದಿ ಅವರು ನಿಗಾ ಇಟ್ಟಿದ್ದು, ಕ್ಷಣ ಕ್ಷಣದ ಮಾಹಿತಿ . ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

 

Related Articles

error: Content is protected !!