ರೋಮ್ : ಜಿ7 ದೇಶಗಳ ಶೃಂಗಸಭೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ಆಗಮಿಸಿದರು. ಈ ವೇಳೆಗೆ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಇದು ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೋದಿ ಅವರ ಮೊದಲ ವಿದೇಶಿ ಪ್ರವಾಸವಾಗಿದೆ.
2 ದಿನಗಳ ಶೃಂಗದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್, ಕೆನಡಾ ಪ್ರಧಾನಿ ಟ್ರುಡೋ, ಜಪಾನ್ ಪ್ರಧಾನಿ ಕಿಶಿದ್ರಾ ಮತ್ತು ಜರ್ಮನಿ ಒಲಾಫ್ ಸ್ಕ್ಲೋಲ್ಡ್ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ. ಭಾರತ ಜಿ7ನ ಭಾಗವಾಗದೇ ಇದ್ದರೂ, ಜಾಗತಿಕ – ಮಟ್ಟದಲ್ಲಿ ಭಾರತದ ಪಾತ್ರವನ್ನು ಗಮನಿಸಿ ಇಟಲಿ ಪ್ರದಾನಿ ಮೆಲೋನಿ, ಪ್ರಧಾನಿ ಮೋದಿಗೆ ವಿಶೇಷ ಆಹ್ವಾನ ನೀಡಿದ್ದಾರೆ.