ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಜೂ.4ರಂದು ಭಾರತೀಯ ಶೇರು ಮಾರುಕಟ್ಟೆ ಹೊಸ ದಾಖಲೆ ಬರೆಯಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸದಿಂದ ಭವಿಷ್ಯ ನುಡಿದಿದ್ದಾರೆ. ತಮ್ಮ ಸರಕಾರ ಗರಿಷ್ಠ ಪ್ರಮಾಣದ ಸುಧಾರಣೆಗಳು ಮತ್ತು ಆರ್ಥಿಕ ನಿರ್ವಹಣೆಯನ್ನು ವಿವೇಕಪೂರ್ಣವಾಗಿ ನಿರ್ವಹಿಸಿದ್ದರಿಂದ ದೇಶದ ಆರ್ಥಿಕ ಸುಭದ್ರವಾಗಿ ಇರುವಂತಾಗಿದೆ ಎಂದಿದ್ದಾರೆ.
ಬಿಜೆಪಿಯು ದಾಖಲೆ ಪ್ರಮಾಣದಲ್ಲಿ ಈ ಬಾರಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಭಾರತೀಯ ಶೇರು ಮಾರುಕಟ್ಟೆ ಹೊಸ ಎತ್ತರಕ್ಕೆ ಏರಲಿದೆ ಎಂಬುದಾಗಿ ಅವರು ಎಕನಾಮಿಕ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೂ.4ರಂದು ಬಿಜೆಪಿಯು ದಾಖಲೆ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ ಹಾಗೇಯೇ ಭಾರತೀಯ ಶೇರು ಮಾರುಕಟ್ಟೆಯೂ ಹೊಸ ದಾಖಲೆ ಬರೆಯಲಿದೆ ಎಂಬುದನ್ನು ನಾನು ವಿಶ್ವಾಸದೊಂದಿಗೆ ಹೇಳಬಲ್ಲೆ ಎಂದಿದ್ದಾರೆ. ‘