Home » ಚಾರ್ ಸೌ ಪಾರ್ : ಚುನಾವಣಾ ತಂತ್ರಗಾರಿಕೆ
 

ಚಾರ್ ಸೌ ಪಾರ್ : ಚುನಾವಣಾ ತಂತ್ರಗಾರಿಕೆ

ಪ್ರಧಾನಿ ನರೇಂದ್ರ ಮೋದಿ

by Kundapur Xpress
Spread the love

ನವದೆಹಲಿ : ‘ಈ ಬಾರಿ ಎನ್‌ಡಿಎ ಮೈತ್ರಿ ಕೂಟ 400 ಸೀಟು ದಾಟುತ್ತದೆ (ಅಬ್ ಕಿ ಬಾರ್ ಚಾರ್ ಸೌ ಪಾರ್) ಎಂಬ ನನ್ನ. ಹೇಳಿಕೆ ಒಂದು ಚುನಾವಣಾ ತಂತ್ರಗಾರಿಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ವಿಪಕ್ಷಗಳಿಗೆ ತಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಿ ತಲುಪಿಸಿದರು ಎಂಬುದೇ ಗೊತ್ತಾಗುತ್ತಿಲ್ಲ. ನಾನು ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳಿದ ಮೇಲೆ ಅವು ‘ಮೋದಿ ಈ ಬಾರಿ 400 ಸೀಟು ದಾಟುತ್ತಾರೋ ಇಲ್ಲವೋ’ ಎಂದು ಚರ್ಚೆ ಶುರು ಮಾಡಿದವು’ ಎಂದು ಪ್ರಧಾನಿ ಚಟಾಕಿ ಹಾರಿಸಿದ್ದಾರೆ.

‘ಇಂಡಿಯಾ ಟೀವಿ’ ಸಂವಾದದಲ್ಲಿ ಮಾತನಾಡಿದ ಅವರು, ‘ಪ್ರತಿಪಕ್ಷಗಳು ಕೇವಲ ನನ್ನನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಅವುಗಳಿಗೆ ನಾನು ಏನು ಮಾಡುತ್ತೇನೆ ಎಂಬುದೇ ಗೊತ್ತಾಗುವುದಿಲ್ಲ. ಅದೇ ಪ್ರಕಾರ ಈಗ ತಾವು ಗೆಲ್ಲುತ್ತೇವೋ ಇಲ್ಲವೋ ಅಥವಾ ಬಿಜೆಪಿಗೆ ಬಹುಮತ ಬರುತ್ತೋ ಇಲ್ಲವೋ ಎಂಬುದನ್ನು ಬಿಟ್ಟು ಮೋದಿಗೆ 400 ಸ್ಥಾನ ಬರುತ್ತೋ ಇಲ್ಲವೋ ಎಂಬ ಚರ್ಚೆಯಲ್ಲಿ ನಿರತವಾಗಿವೆ’ ಎಂದು ಲೇವಡಿ ಮಾಡಿದರು.

   

Related Articles

error: Content is protected !!